ನೀಲಿಕಲ್ಲು ತೆಗೆಯಲು ತೆರಳಿದ ವ್ಯಕ್ತಿ ಸಾವು
ಅಂಕೋಲಾ, ಡಿ.14: ತಾಲೂಕಿನ ಬಡಗೇರಿ ನಿವಾಸಿ ಮಂಕಾಳು ನಾಗಪ್ಪಗೌಡ(45) ಎಂಬವರು ಗಾಬಿತಕೇಣಿಯ ಸಮುದ್ರ ತೀರದಲ್ಲಿ ನೀಲಿಕಲ್ಲು ತೆಗೆಯುತ್ತಿದ್ದ ಸಂದರ್ಭದಲ್ಲಿ ನೀರಿನ ಅಲೆಗೆ ಆಯತಪ್ಪಿ ನೀರು ಪಾಲಾದ ಘಟನೆ ಬುಧವಾರ ನಡೆದಿದೆ.
ಮೃತನ ಶವಕ್ಕಾಗಿ ಸ್ಥಳೀಯ ಈಜುಗಾರರು ಮತ್ತು ಪೊಲೀಸರು ಹುಡುಕಾಟ ನಡೆಸಿ ಶವವನ್ನು ಪತ್ತೆ ಹಚ್ಚಲು ಯಶಸ್ವಿಯಾಗಿದ್ದಾರೆ. ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





