ವಸುಂಧರಾ ರಾಜೇ ಅವರ ಆಗಸ್ಟಾ ವೆಸ್ಟ್ ಲ್ಯಾಂಡ್ ಟೆಂಡರ್ ಬಗ್ಗೆ ಸಿಬಿಐ ತನಿಖೆಗೆ ಸಚಿನ್ ಪೈಲಟ್ ಆಗ್ರಹ

ಹೊಸದಿಲ್ಲಿ, ಡಿ.15 :ರಾಜಸ್ಥಾನದ ವಸುಂಧರಾ ರಾಜೇ ನೇತೃತ್ವದ ಬಿಜೆಪಿ ಸರಕಾರ ಮುಖ್ಯಮಂತ್ರಿಗಳ ಬಳಕೆಗೆಂದುನಿಯಮಗಳಿಂದ ಬದಿಗೆ ಸರಿದುಆಗಸ್ಟಾ ವೆಸ್ಟ್ ಲ್ಯಾಂಡ್ ಹೆಲಿಕಾಪ್ಟರ್ ಖರೀದಿಸಲು ಟೆಂಡರ್ ಆಹ್ವಾನಿಸಿರುವ ವಿಚಾರದ ಮೇಲೆ ಸಿಬಿಐ ತನಿಖೆ ನಡೆಸಬೇಕೆಂದುರಾಜಸ್ಥಾನ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಸಚಿನ್ ಪೈಲಟ್‌ಆಗ್ರಹಿಸಿದ್ದಾರೆ.
ಸರಕಾರಕ್ಕೆ ಎಡಬ್ಲ್ಯೂ 169 ಹೆಲಿಕಾಪ್ಟರ್ ಬೇಕೆಂದು ನಮೂದಿಸಲಾಗಿರುವ ಟೆಂಡರನ್ನು ಹೇಗೆ ಆಹ್ವಾನಿಸಲಾಯಿತೆಂದು ಪ್ರಶ್ನಿಸಿರುವ ಸಚಿನ್ ಪೈಲಟ್, ನಿಯಮಾವಳಿಗಳ ಪ್ರಕಾರ ಟೆಂಡರಿನಲ್ಲಿಅಗತ್ಯವಿರುವ ಹೆಲಿಕಾಪ್ಟರಿನ ತಾಂತ್ರಿಕ ಸ್ಪೆಸಿಫಿಕೇಶನ್ ಹಾಗೂ ಸೀಟಿಂಗ್ ಸಾಮರ್ಥ್ಯ ಹೊರತು ಪಡಿಸಿ ಹೆಸರನ್ನು ಉಲ್ಲೇಖಿಸಲಾಗುವುದಿಲ್ಲ ಎಂದು ಹೇಳಿದ್ದಾರೆ.
ಈ ಬಗ್ಗೆ ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಕೂಡ ಸಂಶಯ ವ್ಯಕ್ತಪಡಿಸಿದ್ದು ಕೇವಲ ಒಂದು ಕಂಪೆನಿಗೆ ಅನುಕೂಲವಾಗುವಂತೆ ಈ ಟೆಂಡರ್ ಕರೆಯಲಾಗಿದ್ದು ಈ ಬಗ್ಗೆ ವಸುಂಧರಾ ರಾಜೇ ಸರಕಾರ ವಿವರಣೆ ನೀಡಬೇಕೆಂದು ಆಗ್ರಹಿಸಿದ್ದಾರೆ.
ಈ ಹಿಂದೆ 2005ರಲ್ಲಿ ವಸುಂಧರಾ ರಾಜೇ ಸರಕಾರ ಸಹಿ ಹಾಕಿದ ಒಪ್ಪಂದ ಹಾಗೂ ನಂತರ ಆಗಸ್ಟಾ ಎಡಬ್ಲ್ಯೂ 109 ಹೆಲಿಕಾಪ್ಟರ್ ಖರೀದಿ ಮಾಡಿದ್ದ ವಿಚಾರವನ್ನುಕೆಲ ತಿಂಗಳ ಹಿಂದೆ ಸಚಿನ್ ಕೆದಕಿದ್ದರು.ಸಿಎಜಿ ತನ್ನ 2008 ವರದಿಯಲ್ಲಿ ಈ ಖರೀದಿ ಬಗ್ಗೆ ಆಕ್ಷೇಪ ಎತ್ತಿತ್ತು.
ಅತ್ತ ಗೆಹ್ಲೋಟ್ ಈ ಬಗ್ಗೆ ಹಲವಾರು ಟ್ವೀಟುಗಳನ್ನು ಮಾಡಿ ಈ ಹಿಂದಿನ ಒಪ್ಪಂದದಲ್ಲಿ ರಾಜ್ಯ ಬೊಕ್ಕಸಕ್ಕೆ ರೂ 1.14 ಕೋಟಿ ನಷ್ಟವಾಗಿದೆಯೆಂದು ಸಿಎಜಿ ವರದಿ ಹೇಳಿರುವಾಗ ರಾಜ್ಯ ಸರಕಾರ ಮತ್ತೆ ಅದೇ ಕಂಪೆನಿಯ ಹೆಲಿಕಾಪ್ಟರ್ ಬೇಕೆಂದು ಟೆಂಡರ್ ಆಹ್ವಾನಿಸಿರುವುದು ಸಂಶಯ ಹುಟ್ಟಿಸುತ್ತದೆ. ಸರಕಾರ ಇದಕ್ಕೆ ಉತ್ತರ ನೀಡಬೇಕು, ಎಂದಿದ್ದಾರೆ.







