ಬಹರೈನ್ : ವಿಶ್ವ ಇಸ್ಲಾಮಿಕ್ ಬ್ಯಾಂಕಿಂಗ್ ಸಮ್ಮೇಳನದಲ್ಲಿ ಭಾಗವಹಿಸಿದ ಡಾ. ಸಿ. ಪಿ. ಹಬೀಬ್ ರೆಹಮಾನ್

ಅಮೆರಿಕಾದ ಲಾರಿಬಾ ಫೈನಾನ್ಸಸ್ ಅಧ್ಯಕ್ಷರ ಜತೆ ಡಾ. ಸಿ. ಪಿ. ಹಬೀಬ್ ರೆಹಮಾನ್
ಮಂಗಳೂರು,ಡಿ.15: ಮಂಗಳೂರಿನ ಯುನಿಟಿ ಕೇರ್ ಎಂಡ್ ಹೆಲ್ತ್ ಸರ್ವಿಸಸ್ ಅಧ್ಯಕ್ಷ ಹಾಗು ವೈದ್ಯಕೀಯ ನಿರ್ದೇಶಕ ಡಾ. ಸಿ. ಪಿ. ಹಬೀಬ್ ರೆಹಮಾನ್ ಅವರು ಬಹರೈನ್ ನಲ್ಲಿ ನಡೆದ ವರ್ಲ್ಡ್ ಇಸ್ಲಾಮಿಕ್ ಬ್ಯಾಂಕಿಂಗ್ ಸಮ್ಮೇಳನದಲ್ಲಿ ಭಾಗವಹಿಸಿದ್ದಾರೆ.ಈ ಸಮ್ಮೇಳನದ ಮುಖ್ಯ ಚರ್ಚಾ ವಿಷಯ ಅಥವಾ ಪರಿಕಲ್ಪನೆ- ‘‘ಇಕನಾಮಿಕ್ ಅನ್ಸರ್ಟೆನಿಟೀಸ್ : ವಿಜಿಲೆನ್ಸ್ ಎಂಡ್ ಗ್ರೋತ್’ (ಆರ್ಥಿಕ ಅನಿಶ್ಚಿತತೆಗಳು : ವಿಚಕ್ಷಣೆ ಮತ್ತು ಬೆಳವಣಿಗೆ)ಆಗಿತ್ತು.ಈ ಆಶಯದಂತೆಯೇವಿಶ್ವ ಆರ್ಥಿಕತೆಪ್ರಸಕ್ತ ನಿರ್ಣಾಯಕ ಹಂತದಲ್ಲಿದ್ದು ಈ ಹಂತದಲ್ಲಿ ವಿಶ್ವಇಸ್ಲಾಮಿಕ್ ಆರ್ಥಿಕಸಂಸ್ಥೆಯನ್ನು ಬಲಪಡಿಸುವ, ಅಭಿವೃದ್ಧಿಪಡಿಸುವ ಹಾಗೂ ಅದನ್ನು ಬೆಂಬಲಿಸುವ ಅಗತ್ಯವನ್ನು ಸಮ್ಮೇಳದಲ್ಲಿ ಒತ್ತಿ ಹೇಳಲಾಯಿತು. ವಿಶ್ವ ಆರ್ಥಿಕ ವ್ಯವಸ್ಥೆಯನ್ನು ಬೆಂಬಲಿಸುವ ನಿಟ್ಟಿನಲ್ಲಿ ನಾಯಕರಿಗೆ ಸೂಕ್ತ ಮಾಹಿತಿಯನ್ನು ಕೂಡ ನೀಡಲಾಯಿತು.
ವಿಶ್ವದಾದ್ಯಂತದ ಸುಮಾರು 40 ದೇಶಗಳಲ್ಲಿರುವಹಲವು ಇಸ್ಲಾಮಿಕ್ ಫೈನಾನ್ಸ್ ಸಂಸ್ಥೆಗಳಿಂದ ಪ್ರಮುಖ ಭಾಷಣಕಾರರು ಈ ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಆರ್ಥಿಕ ನಿಯಂತ್ರಕರು, ಸಿ-ಸೂಟ್ ಬ್ಯಾಂಕರುಗಳು, ಅಸ್ಸೆಟ್ ಮ್ಯಾನೇಜರುಗಳು, ನೀತಿ ರಚನಾಕಾರರು, ಫಿನ್ಟೆಕ್ ಉದ್ಯಮಿಗಳು ಹಾಗೂ ಶಿಕ್ಷಣ ತಜ್ಞರು ಈ ಸಮ್ಮೇಳನದಲ್ಲಿ ಮಾತನಾಡಿದರು. ಇಸ್ಲಾಮಿಕ್ ಬ್ಯಾಂಕಿಂಗ್ ಮತ್ತು ಫೈನಾನ್ಸ್ ಮೂರು ಟ್ರಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ಕ್ಷೇತ್ರವಾಗಿದೆ.
ಈ ಸಮ್ಮೇಳನದ ಮುಖ್ಯಪೋಷಕರಾದ ಬಹರೈನ್ ಪ್ರಧಾನಿ ಅವರ ಸಲಹೆಗಾರರಾದ ಸಲ್ಮಾನ್ ಬಿನ್ ಖಲೀಫಾ ಸಹಿತ ಇಸ್ಲಾಮಿಕ್ ಬ್ಯಾಂಕಿಂಗ್ ಕ್ಷೇತ್ರದ ಹಲವಾರು ಗಣ್ಯರೊಂದಿಗೆ ಡಾ. ಸಿ. ಪಿ ಹಬೀಬ್ ರೆಹಮಾನ್ ಮಾತುಕತೆ ನಡೆಸಿದರು. 1.3 ಬಿಲಿಯನ್ ಜನಸಂಖ್ಯೆಯಿರುವ ಭಾರತದಂತಹ ದೇಶದಲ್ಲಿ ಪ್ರಸಕ್ತ ಬದಲಾಗುತ್ತಿರುವ ಆರ್ಥಿಕ ವಾತಾವರಣದಲ್ಲಿ ಇಸ್ಲಾಮಿಕ್ ಬ್ಯಾಂಕಿಂಗಿಗೆ ಸರಕಾರ ಒಲವು ತೋರಿಸಿರುವುದರಿಂದಬಡ್ಡಿ ರಹಿತ ಇಸ್ಲಾಮಿಕ್ ಬ್ಯಾಂಕಿಂಗ್ ಮುಸ್ಲಿಂ ಸಮುದಾಯಕ್ಕೆ ಮಾತ್ರವಲ್ಲದೆ ಜಾತಿ, ಧರ್ಮ, ಪಂಥಗಳ ಎಲ್ಲೆ ಮೀರಿ ಎಲ್ಲಾ ನಾಗರಿಕರಿಗೂ
ಪ್ರಯೋಜನಕಾರಿಯಾಗಲಿರುವ ಬಗ್ಗೆ ಅವರು ಸಮ್ಮೇಳನದ ಗಮನ ಸೆಳೆದರು.







