ಗಾಣೆಮಾರ್: ಮೌಲಿದ್ ಮಜ್ಲಿಸ್ ಮತ್ತು ನೂತನ ಕಛೇರಿ ಉದ್ಘಾಟನೆ

ಬಂಟ್ವಾಳ, ಡಿ.15: ಇಲ್ಲಿನ ಗಾಣೆಮಾರ್ ನಲ್ಲಿರುವ ಪ್ರತಿಷ್ಠಿತ ವಿದ್ಯಾ ಸಂಸ್ಥೆ ಮಜ್ಲಿಸುದ್ದಅವತಿಲ್ ಇಸ್ಲಾಮಿಯ್ಯನಲ್ಲಿ ಮೌಲಿದ್ ಮಜ್ಲಿಸ್ ನೂತನ ಕಛೇರಿಯನ್ನು ಉದ್ಘಾಟಿಸಲಾಯಿತು.
ಸಂಸ್ಥೆಯ ಚೆಯರ್ಮ್ಯಾನ್ ಹಾಫಿಳ್ ಅಬ್ದುಲ್ ಮಜೀದ್ ಫಾಳಿಲಿ ಕಾಮಿಲ್ ಸಖಾಫಿ ನೇತೃತ್ವ ವಹಿಸಿದ್ದರು. ಮುತಅಲ್ಲಿಮರಿಂದ ವಿಶೇಷ ಪ್ರವಾದಿ ಕೀರ್ತನೆಗಳು ನಡೆದವು. ಸಂಸ್ಥೆಯ ಮುದರ್ರಿಸ್ ಇಸ್ಮಾಯೀಲ್ ಸಅದಿ ಮಾಚಾರ್ ಪ್ರವಾದಿ ಸಂದೇಶ ಭಾಷಣ ಮಾಡಿದರು.
ಮುದರ್ರಿಸರುಗಳಾದ ಅಬೂಬಕರ್ ಸಿದ್ದೀಕ್ ಸಖಾಫಿ ಕಾಯಾರ್, ಫಿರೋಝುದ್ದೀನ್ ಸಅದಿ ಅಲ್ ಮುಈನಿ, ಸಲೀಂ ಹುದೈಫ ಸಖಾಫಿ, ಮಾಸ್ಟರ್ ಸವಾದ್, ಝೈನುದ್ದೀನ್ ಇರಾ, ಸದ್ದಾಂ ಮಾಸ್ಟರ್, ಹಿರಿಯರಾದ ಉಸ್ಮಾನ್ ಹಾಜಿ, ಹಿತೈಷಿಗಳಾದ ಅಶ್ರಫ್ ಮದನಿ ಪಾಂಡವರಕಲ್ಲು, ಫಾರೂಕ್ ಗಾಣೆಮಾರ್ ಮತ್ತಿತರರು ಉಪಸ್ಥಿತರಿದ್ದರು
Next Story





