ಜೇಸಿಐ ಕಡಬ ಕದಂಬ ಘಟಕಾಧ್ಯಕ್ಷರಾಗಿ ತಸ್ಲೀಂ ಮರ್ಧಾಳ
ಪದಾಧಿಕಾರಿಗಳ ಆಯ್ಕೆ

ಕಡಬ, ಡಿ.15. ಪ್ರತಿಷ್ಠಿತ ಜೇಸಿಐ ಕಡಬ ಕದಂಬ ಇದರ ನೂತನ ಘಟಕಾಧ್ಯಕ್ಷರಾಗಿ ಜೇಸಿ. ತಸ್ಲೀಂ ಮರ್ಧಾಳ ಮತ್ತು ಕಾರ್ಯದರ್ಶಿಯಾಗಿ ಜೇಸಿ.ದಿವಾಕರ ಎಂ. ಆಯ್ಕೆಯಾಗಿದ್ದಾರೆ.
ಜೇಸಿರೆಟ್ ಅಧ್ಯಕ್ಷರಾಗಿ ಜೇಸಿರೆಟ್ ಗುಣವತಿ ರವಿಚಂದ್ರ ಹಾಗೂ ಜೂನಿಯರ್ ಜೇಸಿ ಅಧ್ಯಕ್ಷರಾಗಿ ಜೇಜೇಸಿ. ಗಣೇಶ್ ಯು., ಘಟಕದ ಉಪಾಧ್ಯಕ್ಷರಾಗಿ ಜೇಸಿ. ವೆಂಕಟೇಶ್ ಪಾಡ್ಲ, ಜೇಸಿ. ರಮೇಶ್ ಕೊಠಾರಿ, ಪ್ರಕಾಶ್ ಎನ್.ಕೆ., ಜೇಸಿ. ತಿರುಮಲೇಶ್ ಭಟ್, ಕೋಶಾಧಿಕಾರಿಯಾಗಿ ಜೇಸಿ. ಅಯ್ಯೂಬ್ ಹಿಂದುಸ್ಥಾನ್, ಜತೆ ಕಾರ್ಯದರ್ಶಿಯಾಗಿ ಜೇಸಿ. ಅಬ್ದುಲ್ ರಹಿಮಾನ್ ಆಯ್ಕೆಯಾಗಿದ್ದಾರೆ. ನಿರ್ದೇಶಕರಾಗಿ ಜೇಸಿ. ಝಫೀರ್ ಮಹಮ್ಮದ್, ಜೇಸಿ. ನಿಖಿಲ್, ಜೇಸಿ. ಮಹೇಶ್ ಕುಂಟೋಡಿ, ಜೇಸಿ. ಜಯರಾಂ ಮೂರಾಜೆ, ಜೂನಿಯರ್ ಜೇಸಿ ಸಂಯೋಜಕರಾಗಿ ಜೇಸಿ.ರವಿಚಂದ್ರ ಪಡುಬೆಟ್ಟು, ಜೇಸಿರೆಟ್ ಸಂಯೋಜಕರಾಗಿ ಜೇಸಿ. ವೇಣುಗೋಪಾಲ ಕೊಲ್ಲಡ್ಕ, ಘಟಕದ ಗೃಹ ಪತ್ರಿಕೆ ಕದಂಬ ಹಂಸ ಸಂಪಾದಕರಾಗಿ ಜೇಸಿ. ರಾಜೇಶ್ ಎಂ.ಎಸ್. ನೇಮಕಗೊಂಡಿದ್ದಾರೆ. ಡಿ.22ರಂದು ಕಡಬದ ಅನುಗ್ರಹ ಮಿನಿ ಹಾಲ್ ನಲ್ಲಿ ಪದಗ್ರಹಣ ಸಮಾರಂಭ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.





