ಮುನವ್ವರಲಿ ಯೂತ್ ಲೀಗ್ ಅಧ್ಯಕ್ಷ; ಪಿ.ಕೆ. ಫಿರೋಝ್ ಪ್ರಧಾನ ಕಾರ್ಯದರ್ಶಿ

ಮಲಪ್ಪುರಂ,ಡಿ. 15: ಮುನವ್ವರಲಿ ಶಿಹಾಬ್ ತಂಙಳ್ ಮುಸ್ಲಿಂ ಯೂತ್ ಲೀಗ್ ಕೇರಳ ರಾಜ್ಯಾಧ್ಯಕ್ಷ ಹಾಗೂ ಪಿ.ಕೆ. ಫಿರೋಝ್ ಪ್ರಧಾನಕಾರ್ಯದರ್ಶಿ, ಎಂ.ಎ. ಸಮದ್ ಖಚಾಂಚಿ ಆಯ್ಕೆಗೊಂಡಿದ್ದಾರೆಂದು ವರದಿಯಾಗಿದೆ. ಪಾಣಕ್ಕಾಡ್‌ನಲ್ಲಿ ಸೇರಿದ್ದ ಮುಸ್ಲಿಂ ಲೀಗ್ ನಾಯಕರ ಸಭೆಯಲ್ಲಿ ಈ ಬಗ್ಗೆ ತೀರ್ಮಾನವಾಗಿದೆ. ಇಂದು ಕೋಝಿಕ್ಕೋಡ್‌ನಲ್ಲಿ ನಡೆದ ಯೂತ್ ಲೀಗ್ ರಾಜ್ಯ ಕೌನ್ಸಿಲ್‌ನಲ್ಲಿ ಯೂತ್ ಲೀಗ್‌ನ ಪದಾಧಿಕಾರಿಗಳನ್ನು ಘೋಷಿಸಲಾಯಿತು.
ಲೀಗ್ ರಾಜ್ಯಾಧ್ಯಕ್ಷ ಪಾಣಕ್ಕಾಡ್ ಹೈದರಲಿ ಶಿಹಾಬ್‌ತಂಙಳ್‌ರ ಮನೆಯಲ್ಲಿ ನಡೆದ ಸಭೆಯಲ್ಲಿ ಮುಸ್ಲಿಂ ಲೀಗ್ ರಾಜ್ಯ ಪ್ರಧಾನಕಾರ್ಯದರ್ಶಿ ಕೆ.ಪಿ. ಮಜೀದ್, ವಿಧಾನಸಭೆಯಲ್ಲಿ ಶಾಸಕಾಂಗ ಪಕ್ಷ ನಾಯಕ ಪಿ.ಕೆ. ಕುಂಞಾಲಿಕುಟ್ಟಿ, ಜಿಲ್ಲಾಧ್ಯಕ್ಷ ಸಾದಿಕಲಿ ಶಿಹಾಬ್ ತಂಙಳ್ ಮುಂತಾದವರು ಉಪಸ್ಥಿತರಿದ್ದರು ಎಂದು ವರದಿ ತಿಳಿಸಿದೆ.
Next Story





