ಮಲ್ಪೆ ಬಳಿ 3 ನುಸುಳುಕೋರರ ಬಂಧನ
ಸಾಗರ ಕವಚ ಕಾರ್ಯಾಚರಣೆ ಆರಂಭ
ಉಡುಪಿ, ಡಿ.15: ಕರಾವಳಿ ಕಾವಲು ಪಡೆ, ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಉಡುಪಿ ಜಿಲ್ಲಾಡಳಿತದ ಸಹಯೋಗದೊಂದಿಗೆ ಉಡುಪಿ ಜಿಲ್ಲೆಯಲ್ಲಿ ಎರಡು ದಿನಗಳ ‘ಸಾಗರ ಕವಚ’ ಅಣಕು ಕಾರ್ಯಾಚರಣೆ ಇಂದು ಪ್ರಾರಂಭಗೊಂಡಿತು.
ಮೊದಲ ದಿನವಾದ ಇಂದು ಕರಾವಳಿ ಕಾವಲು ಪಡೆಯ ಪೊಲೀಸರು ಮಲ್ಪೆಯಿಂದ ಮಟ್ಟು ಕಡೆಗೆ ಧಾವಿಸುತಿದ್ದ ಮೂವರು ‘ಅಪರಿಚಿತ’ ನುಸುಳುಕೋರರನ್ನು ಮಟ್ಟು ಸಮೀಪ ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
Next Story





