ಎಚ್‌ಪಿಸಿಎಲ್‌ನಿಂದ ಜಾಗೃತಿ ಕಾರ್ಯಕ್ರಮ

ಮಂಗಳೂರು, ಡಿ.15: ಗ್ರಾಹಕರಲ್ಲಿ ನಗದು ರಹಿತ ವ್ಯವಹಾರ ನಡೆಸುವ ಕುರಿತು ಎಚ್‌ಚ್‌ಪಿಸಿಎಲ್ ತೈಲ ಕಂಪೆನಿಯಿಂದ ಬಾಳದ ಪಿ.ಜಿ.ಪೆಟ್ರೋಲ್ ಕೇರ್‌ನಲ್ಲಿ ನಡೆದ ಅರಿವು ಮೂಡಿಸುವ ಕಾರ್ಯಕ್ರಮವನ್ನು ಸಂಸದ ನಳಿನ್ ಕುಮಾರ್ ಕಟೀಲ್ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು ಪ್ರಧಾನಿ ನರೇಂದ್ರ ಮೋದಿಯ ಆಶಯದಂತೆ ಕ್ರೆಡಿಟ್, ಡೆಬಿಟ್, ಲೊಯಲ್ಟಿ ಕಾರ್ಡುಗಳನ್ನು ಪೆಟ್ರೋಲ್ ಪಂಪುಗಳಲ್ಲಿ ಉಪಯೋಗಿಸಿ ಇಂಧನದ ಮೇಲೆ ಶೇ.0.75 ಕಡಿತ ಪಡೆದುಕೊಳ್ಳಬೇಕು. ಎಲ್ಲ ವ್ಯವಹಾರಗಳನ್ನು ಕಾರ್ಡುಗಳ ಮೂಲಕವೇ ಮಾಡಿದರೆ ಪಾರದರ್ಶಕತೆ ಕಾಪಾಡಲು ಸಾಧ್ಯವಿದೆ. ಈಗ ಇರುವ ಶೇ.25 ನಗದು ರಹಿತ ವ್ಯವಹಾರವನ್ನು ತಿಂಗಳಾಂತ್ಯಕ್ಕೆ ಶೇ.50ಕ್ಕೆ ಹೆಚ್ಚಿಸುವ ಗುರಿ ಹಾಕಲಾಗಿದೆ ಎಂದರು.
ಎಚ್‌ಪಿಸಿಎಲ್‌ನ ದಕ್ಷಿಣ ಕೇಂದ್ರ ವಲಯದ ಉಪ ಮಹಾ ಪ್ರಬಂಧಕ ನರಸಿಂಹ ಕೆ.ಛಾರಿ, ಉಪಮಹಾಪ್ರಬಂಧಕ ಟಿ.ರಮಣಬಾಬು, ಮುಖ್ಯ ಪ್ರಾದೇಶಿಕ ಪ್ರಬಂಧಕ ಎಂ. ವಸಂತರಾವ್ ಮತ್ತಿತರರು ಉಪಸ್ಥಿತರಿದ್ದರು.
Next Story





