ಎಂಇಟಿ ಶಾಲೆಯ ವಾರ್ಷಿಕ ಕ್ರೀಡಾಕೂಟ

ಉಡುಪಿ, ಡಿ.15: ಕ್ರೀಡೆಯಿಂದ ದೇಹ ಮತ್ತು ಮನಸ್ಸು ಉತ್ತಮವಾಗಿ ಕಾರ್ಯ ನಿರ್ವಹಿಸಲು ಸಾಧ್ಯ. ಶಾಲೆಗಳಲ್ಲಿ ಪಠ್ಯದ ಜೊತೆ ಕ್ರೀಡೆ ಹಾಗೂ ಪಠ್ಯೇತರ ಚಟುವಟಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಿದಾಗ ಮಕ್ಕಳಲ್ಲಿ ಧನಾತ್ಮಕವಾದ ಬದಲಾವಣೆಗಳು ಕಂಡು ಬರಲು ಸಾಧ್ಯ ಎಂದು ಉಡುಪಿ ಡಿವೈಎಸ್‌ಪಿ ಎಸ್.ಜೆ.ಕುಮಾರ್‌ಸ್ವಾಮಿ ಹೇಳಿದ್ದಾರೆ.
ಉದ್ಯಾವರ ಕೊರಂಗ್ರಪಾಡಿ ಎಂ.ಇ.ಟಿ. ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕ ಕ್ರೀಡೋತ್ಸವವನ್ನು ಇತ್ತೀಚೆಗೆ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಮುಖ್ಯ ಅತಿಥಿಗಳಾಗಿ ಉದ್ಯಾವರ ಗ್ರಾಪಂ ಉಪಾಧ್ಯಕ್ಷ ರಿಯಾಜ್ ಪಳ್ಳಿ, ಉಡುಪಿ ಇಂದ್ರಾಳಿ ಲಯನ್ ್ಸಕ್ಲಬ್ ಅಧ್ಯಕ್ಷ ಮಹಮ್ಮದ್ ಮೌಲ, ಪತ್ರಕರ್ತ ರಾಕೇಶ್‌ಕುಂಜೂರ್ ಶುಭ ಹಾರೈಸಿದರು. ಮಹಮ್ಮದ್ ಸುಹೇಲ್ ತೋಟ, ಅನ್ಸಾರ್‌ಅಹಮ್ಮದ್, ಕಲಿಮುಲ್ಲಾ ತೋನ್ಸೆ, ಹಾಜಿ ಅಬ್ದುಲ್ಲಾ ಪರ್ಕಳ ಉಪಸ್ಥಿತರಿದ್ದರು.
ಆಡಳಿತಾಧಿಕಾರಿ ಖಲೀಲ್ ಅಹಮ್ಮದ್ ಪ್ರಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಶಿಕ್ಷಕಿ ಪ್ರವಲ್ಲಿಕಾ ವಂದಿಸಿದರು. ಸಂಜೆ ನಡೆದ ಸಮಾರಂಭ ದಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಶಾಲಾ ಪೋಷಕರು ಬಹುಮಾನ ವಿತರಿಸಿದರು.





