ಕಾಗೋಡು, ಖಾದರ್ ಸೇರಿದಂತೆ ಐವರು ಸಚಿವರಿಂದ ಬರ ಅಧ್ಯಯನ ಪ್ರವಾಸ

ಬೆಂಗಳೂರು, ಡಿ. 15: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ರಾಜ್ಯದಲ್ಲಿ ಬರಪೀಡಿತ ಪ್ರದೇಶದ ಅಧ್ಯಯನ ಸಮಿತಿ ರಚಿಸಿದ್ದು, ಮೈಸೂರು ವಿಭಾಗದ ಆರು ಜಿಲ್ಲೆಗಳಿಗೆ ಐವರು ಸಚಿವರ ತಂಡವನ್ನು ನೇಮಕ ಮಾಡಲಾಗಿದೆ. ಈ ತಂಡ ಡಿಸೆಂಬರ್ 15 ರಿಂದ 17ರ ತನಕ ಬರಪೀಡಿತ ಪ್ರದೇಶವನ್ನು ಸಂದರ್ಶಿಸಿ ಅಧ್ಯಯನ ವರದಿ ಸಲ್ಲಿಸಲಿದೆ.
ಕಂದಾಯ ಮತ್ತು ಮುಜರಾಯಿ ಇಲಾಖೆಯ ಸಚಿವ ಕಾಗೋಡು ತಿಮ್ಮಪ್ಪ ನೇತೃತ್ವದ ತಂಡದಲ್ಲಿ ಸಚಿವರಾದ ಯು.ಟಿ.ಖಾದರ್, ರಮೇಶ್ ಕುಮಾರ್, ಎಚ್.ಸಿ.ಮಹದೇವಪ್ಪ, ಎಚ್.ಎಸ್.ಮಹದೇವಪ್ರಸಾದ್ ಇದ್ದಾರೆ.
16ರಂದು ಮೈಸೂರು ಮತ್ತು ಕೊಡಗು ಜಿಲ್ಲೆ, 17ರಂದು ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಯಲ್ಲಿ ಸಚಿವರ ತಂಡ ಅಧ್ಯಯನ ಪ್ರವಾಸ ನಡೆಸಲಿದೆ.
ಈ ದಿನಗಳಲ್ಲಿ ಈ ಹಿಂದೆ ನಿಗದಿಪಡಿಸಲಾಗಿದ್ದ ಸಚಿವರ ಎಲ್ಲಾ ಸಾರ್ವಜನಿಕ ಕಾರ್ಯಕ್ರಮಗಳನ್ನು ರದ್ದುಪಡಿಸಲಾಗಿದೆ ಎಂದು ತಿಳಿದು ಬಂದಿದೆ.
Next Story





