ದಕ್ಷಿಣ ಚೀನಾ ಸಮುದ್ರದಲ್ಲಿ ವಿಮಾನ ನಿರೋಧಕ ಅಸ್ತ್ರಗಳು: ವರದಿ

ಬೀಜಿಂಗ್, ಡಿ. 15: ದಕ್ಷಿಣ ಚೀನಾ ಸಮುದ್ರದಲ್ಲಿರುವ ತನ್ನ ಮಾನವ ನಿರ್ಮಿತ ದ್ವೀಪಗಳಲ್ಲಿ ಚೀನಾವು ವಿಮಾನ ನಿರೋಧಕ ಮತ್ತು ಕ್ಷಿಪಣಿ ನಿರೋಧಕ ಅಸ್ತ್ರಗಳನ್ನು ಸ್ಥಾಪಿಸಿರುವುದನ್ನು ಇತ್ತೀಚಿನ ಉಪಗ್ರಹ ಚಿತ್ರಗಳು ತೋರಿಸಿವೆ ಎಂದು ಅಮೆರಿಕದ ರಕ್ಷಣಾ ವಿಶ್ಲೇಷಣಾ ಸಂಸ್ಥೆಯೊಂದು ಹೇಳಿದೆ.
ವಿಮಾನ ನಿದೋಧಕ ಬಂದೂಕುಗಳು ಮತ್ತು ಕ್ಷಿಪಣಿ ದಾಳಿಯ ವಿರುದ್ಧದ ರಕ್ಷಣೆಯಲ್ಲಿ ಬಳಸುವ ಶಸ್ತ್ರಾಸ್ತ್ರ ವ್ಯವಸ್ಥೆಗಳನ್ನು ಚೀನಾದ ಹೊಸದಾಗಿ ನಿರ್ಮಿಸಲಾದ ಎಲ್ಲ ಏಳು ದ್ವೀಪಗಳಲ್ಲಿ ಸ್ಥಾಪಿಸಲಾಗಿದೆ ಎಂದು ಸೆಂಟರ್ ಫಾರ್ ಸ್ಟ್ರಾಟಜಿಕ್ ಆ್ಯಂಡ್ ಇಂಟರ್‌ನ್ಯಾಶನಲ್ ಸ್ಟಡೀಸ್ ಬುಧವಾರ ಬಿಡುಗಡೆ ಮಾಡಿದ ವರದಿಯೊಂದರಲ್ಲಿ ತಿಳಿಸಿದೆ.
Next Story





