‘ಮುಸ್ಲಿಮ್ ರಿಜಿಸ್ಟ್ರಿ’ಗೆ ನಾವು ಸಹಾಯ ಮಾಡುವುದಿಲ್ಲ: ಫೇಸ್‌ಬುಕ್

ವಾಶಿಂಗ್ಟನ್, ಡಿ. 15: ಮುಸ್ಲಿಮ್ ಪ್ರಾಬಲ್ಯದ ದೇಶಗಳಿಂದ ಬರುವ ವಲಸಿಗರ ಮಾಹಿತಿಕೋಶವನ್ನು ಪುನರ್‌ರೂಪಿಸುವ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಯೋಜನೆಗೆ ಸಹಕಾರ ನೀಡದಿರಲು ಸಾಮಾಜಿಕ ಜಾಲ ತಾಣ ‘ಫೇಸ್‌ಬುಕ್’ ನಿರ್ಧರಿಸಿದೆ.
ಇದೇ ನಿಲುವನ್ನು ‘ಟ್ವಿಟರ್’ ಮೊದಲು ತೆಗೆದುಕೊಂಡಿತ್ತು. ಅದರ ಸಾಲಿಗೆ ಈಗ ಫೇಸ್‌ಬುಕ್ ಸೇರ್ಪಡೆಗೊಂಡಿದೆ.
ಮುಸ್ಲಿಮ್ ರಿಜಿಸ್ಟ್ರಿಯನ್ನು ತಯಾರಿಸಲು ಟ್ರಂಪ್ ಸರಕಾರಕ್ಕೆ ತಾನು ನೆರವು ನೀಡುವುದಿಲ್ಲ ಎಂದು ಮಾರ್ಕ್ ಝುಕರ್‌ಬರ್ಗ್ ನೇತೃತ್ವದ ಫೇಸ್‌ಬುಕ್ ಹೇಳಿದೆ.
‘‘ಮುಸ್ಲಿಮ್ ರಿಜಿಸ್ಟ್ರಿಯನ್ನು ತಯಾರಿಸುವಂತೆ ನಮ್ಮನ್ನು ಯಾರೂ ಕೇಳಿಲ್ಲ. ನಾವು ಹಾಗೆ ಮಾಡುವುದೂ ಇಲ್ಲ’’ ಎಂದು ಫೇಸ್‌ಬುಕ್ ವಕ್ತಾರರೋರ್ವರು ಹೇಳಿರುವುದಾಗಿ ‘ಸಿಎನ್‌ಎನ್‌ಮನಿ’ ವರದಿ ಮಾಡಿದೆ.
Next Story





