Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಕರ್ನಾಟಕದ ಶಿಖಾ ಗೌತಮ್ ಕ್ವಾರ್ಟರ್ ಫೈನಲ್...

ಕರ್ನಾಟಕದ ಶಿಖಾ ಗೌತಮ್ ಕ್ವಾರ್ಟರ್ ಫೈನಲ್ ಗೆ

41ನೇ ಜೂನಿಯರ್ ರಾಷ್ಟ್ರೀಯ ಬ್ಯಾಡ್ಮಿಂಟನ್ ಟೂರ್ನಿ

ವಾರ್ತಾಭಾರತಿವಾರ್ತಾಭಾರತಿ15 Dec 2016 10:27 PM IST
share
ಕರ್ನಾಟಕದ ಶಿಖಾ ಗೌತಮ್ ಕ್ವಾರ್ಟರ್ ಫೈನಲ್ ಗೆ

ಉಡುಪಿ, ಡಿ.15: ಅಜ್ಜರಕಾಡಿನ ಜಿಲ್ಲಾ ಒಳಾಂಗಣ ಕ್ರೀಡಾಂಗಣ ಹಾಗೂ ಮಣಿಪಾಲದ ಮಣಿಪಾಲ ವಿವಿ ಮರೀನಾ ಒಳಾಂಗಣ ಕ್ರೀಡಾಂಗಣದಲ್ಲಿ ಉಡುಪಿ ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಷನ್ ಮತ್ತು ಮಣಿಪಾಲ ವಿವಿಗಳ ಜಂಟಿ ಆಶ್ರಯದಲ್ಲಿ ನಡೆದಿರುವ 41ನೇ ಜೂನಿಯರ್ ರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನ 19 ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರ ಸಿಂಗಲ್ಸ್‌ನಲ್ಲಿ ಅಗ್ರಸೀಡ್ ಪಡೆದಿರುವ ಯುಟಿಆರ್‌ನ ಲಕ್ಷಾ ಸೇನ್ ಹಾಗೂ ಕರ್ನಾಟಕದ ಶಿಖಾ ಗೌತಮ್ ಕ್ವಾರ್ಟರ್ ಫೈನಲ್ ಹಂತ ಪ್ರವೇಶಿಸಿದ್ದಾರೆ.

ಉಡುಪಿ, ಡಿ.15: ಅಜ್ಜರಕಾಡಿನ ಜಿಲ್ಲಾ ಒಳಾಂಗಣ ಕ್ರೀಡಾಂಗಣ ಹಾಗೂ ಮಣಿಪಾಲದ ಮಣಿಪಾಲ ವಿವಿ ಮರೀನಾ ಒಳಾಂಗಣ ಕ್ರೀಡಾಂಗಣದಲ್ಲಿ ಉಡುಪಿ ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಷನ್ ಮತ್ತು ಮಣಿಪಾಲ ವಿವಿಗಳ ಜಂಟಿ ಆಶ್ರಯದಲ್ಲಿ ನಡೆದಿರುವ 41ನೇ ಜೂನಿಯರ್ ರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನ 19 ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರ ಸಿಂಗಲ್ಸ್‌ನಲ್ಲಿ ಅಗ್ರಸೀಡ್ ಪಡೆದಿರುವ ಯುಟಿಆರ್‌ನ ಲಕ್ಷಾ ಸೇನ್ ಹಾಗೂ ಕರ್ನಾಟಕದ ಶಿಖಾ ಗೌತಮ್ ಕ್ವಾರ್ಟರ್ ಫೈನಲ್ ಹಂತ ಪ್ರವೇಶಿಸಿದ್ದಾರೆ.

ಇಂದು ನಡೆದ ಪ್ರಿಕ್ವಾರ್ಟರ್ ಫೈನಲ್‌ನಲ್ಲಿ ಶಿಖಾ ಗೌತಮ್ ಅವರು ತನ್ನ ಎದುರಾಳಿ 14ನೇ ಸೀಡ್ ಮಹಾರಾಷ್ಟ್ರದ ಪೂರ್ವ ಬಾರ್ವಿ ಅವರನ್ನು ಮೂರು ನಿಕಟ ಗೇಮ್‌ಗಳಲ್ಲಿ 17-21, 21-16, 21-10ರ ಅಂತರದಿಂದ ಹಿಮ್ಮೆಟ್ಟಿಸಿದರು. ಮೊದಲ ಗೇಮ್‌ನ್ನು ಸೋತ ಶಿಖಾ ದಿಟ್ಟ ಚೇತರಿಕೆ ತೋರಿ ಮುಂದಿನೆರಡು ಗೇಮ್‌ಗಳನ್ನು ಜಯಿಸುವ ಮೂಲಕ ಅಂತಿಮ ಎಂಟರ ಹಂತಕ್ಕೇರಿದರು.

 19 ವರ್ಷದೊಳಗಿನ ಬಾಲಕರ ಅಗ್ರಸೀಡ್ ಲಕ್ಷಾ ಸೇನ್ ಅವರು ಮತ್ತೊಂದು ಪಂದ್ಯದಲ್ಲಿ ಏರಿಂಡಿಯಾದ ರಾಹುಲ್ ಭಾರದ್ವಾಜ್ ಅವರನ್ನು 21-17, 21-14ರ ಅಂತರಂದ ಹಿಮ್ಮೆಟ್ಟಿಸಿದರು. ಕರ್ನಾಟಕ ರಘು ಎಂ. ಅವರು ನಾಲ್ಕನೇ ಸೀಡ್ ಪಶ್ಚಿಮ ಬಂಗಾಳದ ಅರಿಂತಾಪ್ ದಾಸ್‌ಗುಪ್ತರನ್ನು ಅಚ್ಚರಿಯ ಫಲಿತಾಂಶದಲ್ಲಿ 23-21, 21-15ರ ಅಂತರಿಂದ ಸೋಲಿಸಿ ಅಂತಿಮ ಎಂಟರ ಸುತ್ತನ್ನೇರಿದರು.

ಉಳಿದಂತೆ ಬಾಲಕಿಯರ ವಿಭಾಗದಲ್ಲಿ ಹರ್ಯಾಣದ ಇರಾ ಶರ್ಮ, ಏರಿಂಡಿಯಾದ ಕನಿಕಾ ಕನ್ವಾಲ್, ಅಸ್ಸಾಂನ ಅಶ್ಮಿತಾ ಚಾಲಿಹಾ, ಏರಿಂಇಯಾದ ಪ್ರಾಶಿ ಜೋಷಿ, ಉತ್ತರ ಪ್ರದೇಶದ ರಿಯಾ ಮುಖರ್ಜಿ, ಮಹಾರಾಷ್ಟ್ರದ ವೈದೇಹಿ ಚೌಧುರಿ, ಎ.ಕಶ್ಯಪ್ ಅವರು ಕ್ವಾರ್ಟರ್ ಫೈನಲ್‌ಗೇರಿದ್ದಾರೆ.
19 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಕೇರಳದ ಕಿರಣ್ ಜೋರ್ಜ್, ಆಂದ್ರದ ಜಸ್ವಂತ್ ಡಿ., ದಿಲ್ಲಿಯ ಕೌಸ್ತುಭ ರಾವತ್, ಬಿ.ಜೋಶಿ ಅವರು ಸಹ ಅಂತಿಮ ಎಂಟರ ಹಂತದಲ್ಲಿ ಆಡುವ ಅರ್ಹತೆಏ ಪಡೆದುಕೊಂಡಿದ್ದಾರೆ.

ಇನ್ನು 19 ವರ್ಷದೊಳಗಿನವರ ಮಿಕ್ಸೆಡ್ ಡಬಲ್ಸ್‌ನಲ್ಲಿ ಕರ್ನಾಟಕದ ಧ್ರುವ ಕಪಿಲಾ, ಮಿಥುಲಾ ಯು.ಕೆ., ನಿಖಿಲ್ ಶ್ಯಾಮ್ ಶ್ರೀರಾಮತ್ ಮತ್ತು ಅಪೇಕ್ಷಾ ನಾಯಕ್ ಅವರು ಕ್ವಾರ್ಟರ್ ಫೈನಲ್ ಪ್ರವೇಶಿಸಿದರೆ, ಅಗ್ರಸೀಡ್ ಚಂದ್ರಕುಮಾರ್ ಡಿ ಮತ್ತು ಸೋನಿಕಾ ಸಾಯಿ ಪಿ. ಅವರು ಸಹ ಇವರನ್ನು ಕೂಡಿಕೊಂಡಿದ್ದಾರೆ.

17 ವರ್ಷದೊಳಗಿನ ಬಾಲಕಿಯರ ಸಿಂಗಲ್ಸ್‌ನಲ್ಲಿ ಕರ್ನಾಟಕದ ದೀಪ್ತಿ ರಮೇಶ್ ಅವರು ಮಹಾರಾಷ್ಟ್ರದ ಪುರ್ವ ಬಾರ್ವೆ ಅವರ ಕೈಯಲ್ಲಿ ಪರಾಭವದ ಕಹಿ ಅನುಭವಿಸಿದರು. ಅಗ್ರಸೀಡ್ ಆಕರ್ಷಿ ಕಶ್ಯಪ್, 2ನೇ ಸೀಡ್ ಪ್ರಾಶಿ ಜೋಷಿ ಅವರು ಮುಂದಿನ ಸುತ್ತಿಗೆ ತೇರ್ಗಡೆಗೊಂಡವರಲ್ಲಿ ಸೇರಿದ್ದಾರೆ.
17 ವರ್ಷದೊಳಗಿನ ಬಾಲಕರ ಸಿಂಗಲ್ಸ್‌ನಲ್ಲೂ ಆತಿಥೇಯ ಕರ್ನಾಟಕದ ಯಾವುದೇ ಆಟಗಾರ ಕ್ವಾರ್ಟರ್ ಫೈನಲ್ ಹಂತಕ್ಕೇರಿಲ್ಲ. ಬಾಲಕಿಯರ ಡಬಲ್ಸ್‌ನಲ್ಲಿ ಅಗ್ರ,ಸೀಡ್ ಕರ್ನಾಟಕದ ಅಶ್ವಿನಿ ಭಟ್ ಕೆ. ಮತ್ತು ಮಿಥುಲಾ ಯು.ಕೆ. ಅವರು ಪಂಜಾಬ್‌ನ ಪೇರ್ನ ದವರ್ ಮತ್ತು ವಂಶಿಕ ಟಂಡನ್‌ರನ್ನು ಸೋಲಿಸಿ ಸ್ಪರ್ಧಾಕಣದಲ್ಲಿ ಉಳಿದುಕೊಂಡಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X