ಕಾಸರಗೋಡು : ತಾಜೇ ಮದೀನ ಮೀಲಾದ್ ಫೆಸ್ಟ್

ಕಾಸರಗೋಡು, ಡಿ.15 : ನೆಲ್ಲಿಕ್ಕುನ್ನು ಮಂಬಉಲ್ ಉಲೂಂ ದರ್ಸ್ ಲ್ಲಿ ನಡೆದ ದಿ ಲೇಟ್ ತಾಜೇ ಮದೀನ ಮೀಲಾದ್ ಫೆಸ್ಟನ್ನು ಕಾಸರಗೋಡು ಶಾಸಕ ಎನ್.ಎ ನೆಲ್ಲಿಕ್ಕುನ್ನು ಉದ್ಘಾಟನೆ ಮಾಡಿದರು.
ಖತೀಬ್ ಅಬ್ದುರ್ರಹ್ಮಾನ್ ಮದನಿ ದುಆ ಮಾಡಿದರು.
ಮುದರ್ರಿಸ್ ಸ್ವಲಾಹುದ್ದೀನ್ ಸಖಾಫಿ ಮಾಡನ್ನೂರು ಅದ್ಯಕ್ಷತೆ ವಹಿಸಿದರು.
ಮಸೀದಿ ಕಾರ್ಯದರ್ಶಿ ಬಿ.ಕೆ ಖಾದರ್ ಖಜಾಂಜಿ ಹನೀಫ್ ಹಾಗೂ ದುಬಾಯಿ ನೆಲ್ಲಿಕ್ಕುನ್ನು ಜಮಾಅತ್ ಅದ್ಯಕ್ಷ ಇಬ್ರಾಹೀಂ ತಯಿವಲಪ್ಪ್ ಬಾಷನ ಮಾಡಿದರು.
ಕಾರ್ಯಕ್ರಮ ಸಂಚಾಲಕ ನವಾಝ್ ಅಝ್ಹರಿ ಕಿಲ್ಲೂರು , ಹಸನ್ ಅಹ್ಸನಿ ಮಂಜನಾಡಿ, ದುಬಾಯಿ ಕಾರ್ಯದರ್ಶಿ ಶಾಫಿ ಕೋಟ್ , ಮಜೀದ್ ನಈಮಿ ಅಂಚಿನಡ್ಕ , ಅಝೀಝ್ ನಈಮಿ ನೆಲ್ಲಿಕ್ಕಟ್ಟೆ , ನಾಸಿರ್ ಸಖಾಫಿ ಮುಚ್ಚಿಲ, ಸಾಬಿತ್ ಅಹ್ಸನಿ ದೇಲಂಪಾಡಿ , ಸತ್ತಾರ್ ಸಖಾಫಿ ಮತ್ತಿತರರು ಉಪಸ್ಥಿತರಿದ್ದರು.
ಹಾಪಿಝ್ ಮುಈನುದ್ದೀನ್ ಉಳ್ಳಾಲ ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು.
Next Story





