ಮಹಿಳೆ ನಾಪತ್ತೆ
ಚಿಕ್ಕಮಗಳೂರು, ಡಿ.15: ನರಸಿಂಹರಾಜಪುರ ತಾಲೂಕಿನ ವಗ್ಗಡೆ ಗ್ರಾಮದ ವಾಸಿ ಉದಯಕುಮಾರ್ ಎಂಬವರ ಪತ್ನಿ ರಜನಿ (28) ಎಂಬವರು ನಾಪತ್ತೆಯಾಗಿರುವ ಬಗ್ಗೆ ನ.ರಾ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಡಿ.1ರಿಂದ ಮನೆಗೆ ಬಾರದೆ ಕಾಣೆಯಾಗಿರುವ ಈ ಮಹಿಳೆಯ ಬಗ್ಗೆ ಮಾಹಿತಿ ದೊರೆತಲ್ಲಿ ಪೊಲೀಸ್ ಉಪನಿರೀಕ್ಷಕರು, ನರಸಿಂಹರಾಜಪುರ ಪೊಲೀಸ್ ಠಾಣೆಯನ್ನು ಸಂಪರ್ಕಿಸಲು ಪ್ರಕಟನೆಯಲ್ಲಿ ತಿಳಿಸಿದೆ.
Next Story





