ಬಪ್ಪನಾಡು ಸಹಿತ ಅನೇಕ ಕಡೆ ಒಳಚರಂಡಿಗೆ ಚಾಲನೆ

ಮೂಲ್ಕಿ, ಡಿ.15 : ಕಳೆದ ವರ್ಷಗಳ ಹಿಂದೆ ಕಾಂಕ್ರೀಟೀಕರಣಗೊಂಡು ಸೂಕ್ತ ಚರಂಡಿ ಇಲ್ಲದೆ ಅಪಾಯಕಾರಿ ಸ್ಥಿತಿಯಲ್ಲಿದ್ದ ಬಪ್ಪನಾಡು-ವಿಜಯಾಕಾಲೇಜು- ಏಳಿಂಜೆ ಲೋಕೋಪಯೋಗಿ ರಸ್ತೆ ದುರಸ್ಥಿಗೆ ಚಾಲನೆ ದೊರೆತಿದೆ.
ಸುಮಾರು ಒಂದು ಕೋಟಿ ನಗರೋತ್ಥಾನ ಯೋಜನೆಯಡಿ ಮೂಲ್ಕಿ ನಗರ ಪಂಚಾಯತ್ ವ್ಯಾಪ್ತಿಯ 5 ಕಡೆಗಳಲ್ಲಿ ಚರಂಡಿ ನಿರ್ಮಿಸಲು ಮಾಜಿ ಸಚಿವ ಅಭಯಚಂದ್ರ ಜೈನ್ ಶಿಲಾನ್ಯಾಸ ನೆರವೇರಿಸಿದ್ದಾರೆ.ಮೂಲ್ಕಿ ನಗರ ಪಂಚಾಯತಿ ವ್ಯಾಪ್ತಿಯ ಬಪ್ಪನಾಡು,ಚಿತ್ರಾಪು, ಮರ್ಕಂಜ,ಕೆಎಸ್‌ರಾವ್ ನಗರ ಹಾಗೂ ಬಿಜಾಪುರ ಕಾಲನಿಯ ತೀವ್ರ ಹಿಂದುಳಿದ ಪ್ರದೇಶಗಳಲ್ಲಿ ಚರಂಡಿ ನಿರ್ಮಿಸಲು ನಿರ್ದರಿಸಲಾಗಿದೆ ಎಂದು ಮಾಜಿ ಸಚಿವ ಅಭಯಚಂದ್ರ ಹೇಳಿದ್ದಾರೆ.
ಮಾತಿನ ಚಕಮಕಿ
ಮಾಜೀ ಸಚಿವ ಅಭಯಚಂದ್ರ ನೇತ್ರತ್ವದ ಕಾಂಗ್ರೆಸ್ಸ್ ಪಕ್ಷ ಹಾಗೂ ಮೂಲ್ಕಿ ನ.ಪಂ. ಅಧ್ಯಕ್ಷ ಸುನಿಲ್ ಆಳ್ವ ನೇತೃತ್ವದಲ್ಲಿ ತೀವ್ರ ಹಿಂದುಳಿದ ಪ್ರದೇಶವಾದ ಕೆಎಸ್‌ರಾವ್ ನಗರದಲ್ಲಿ ಒಳಚರಂಡಿ ವ್ಯವಸ್ಥೆಗೆ ಭೇಟಿ ನೀಡಿದಾಗ ಸ್ಥಳೀಯ ಪಂಚಾಯತಿ ಸದಸ್ಯ ಹಾಗೂ ಅಭಯಚಂದ್ರಗೂ ಮಾತಿನ ಚಕಮಕಿ ನಡೆದ ಬಗ್ಗೆ ವರದಿಯಾಗಿದೆ.
ಕಳೆದ ದಿನಗಳ ಹಿಂದೆ ಬಿಜೆಪಿ ಪಕ್ಷವು ತನ್ನಪಕ್ಷದ ಸ್ಲಂ ಮೋರ್ಚಾದ ಅಧ್ಯಕ್ಷರೊಬ್ಬರನ್ನು ಕೆಎಸ್‌ರಾವ್ ನಗರಕ್ಕೆ ಕರೆಸಿ ಕ್ಷುಲ್ಲಕ ರಾಜಕಾರಣ ನಡೆಸುತ್ತಿದೆ ಎಂಬ ಕಾರಣಕ್ಕೆ ಸಂಬಂದಿಸಿದಂತೆ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದೆ.







