ಐದನೆ ಟೆಸ್ಟ್‌ನಿಂದ ಆ್ಯಂಡರ್ಸನ್ ಔಟ್
ಚೆನ್ನೈ, ಡಿ.15: ಭಾರತ ವಿರುದ್ಧ ಶುಕ್ರವಾರ ಇಲ್ಲಿ ಆರಂಭವಾಗಲಿರುವ ಐದನೆ ಹಾಗೂ ಅಂತಿಮ ಟೆಸ್ಟ್‌ನಲ್ಲಿ ಜೇಮ್ಸ್ ಆ್ಯಂಡರ್ಸನ್ ಭಾಗವಹಿಸುವುದಿಲ್ಲ.
ಇಂಗ್ಲೆಂಡ್‌ನ ಸಾರ್ವಕಾಲಿಕ ಶ್ರೇಷ್ಠ ಬೌಲರ್ ಆ್ಯಂಡರ್ಸನ್ ಅಸೌಖ್ಯದಿಂದಾಗಿ ಐದನೆ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದಾರೆ ಎಂದು ನಾಯಕ ಅಲಿಸ್ಟರ್ ಕುಕ್ ಹೇಳಿದ್ದಾರೆ.
ವೇಗದ ಬೌಲರ್ ಆ್ಯಂಡರ್ಸನ್ ಕಳೆದ ಆಗಸ್ಟ್‌ನಿಂದ ಭುಜನೋವಿನಿಂದ ಬಳಲುತ್ತಿದ್ದಾರೆ. ಭಾರತ ವಿರುದ್ಧ ಎರಡನೆ ಟೆಸ್ಟ್‌ನಲ್ಲಿ ಆಡುವ ಮೂಲಕ ಸಕ್ರಿಯ ಕ್ರಿಕೆಟ್‌ಗೆ ವಾಪಸಾಗಿದ್ದರು.
‘‘ಕಳೆದ ಪಂದ್ಯದಲ್ಲಿ ಗಾಯಗೊಂಡಿರುವ ಜಿಮ್ಮಿ(ಆ್ಯಂಡರ್ಸನ್) ಐದನೆ ಟೆಸ್ಟ್‌ನಿಂದ ಹೊರಗುಳಿದಿದ್ದಾರೆ. ನಾವು ಅವರನ್ನು ಆಡಿರುವ ರಿಸ್ಕ್ ತೆಗೆದುಕೊಳ್ಳುವುದಿಲ್ಲ’’ ಎಂದು ಪಂದ್ಯಪೂರ್ವ ಪತ್ರಿಕಾಗೋಷ್ಠಿಯಲ್ಲಿ ಕುಕ್ ತಿಳಿಸಿದ್ದಾರೆ.
ಬಲಗಾಲಿನ ಬೆರಳು ನೋವಿನಿಂದ ಬಳಲುತ್ತಿರುವ ಸ್ಟುವರ್ಟ್ ಬ್ರಾಡ್ ಕಳೆದ ಎರಡು ಟೆಸ್ಟ್ ಪಂದ್ಯಗಳನ್ನು ತಪ್ಪಿಸಿಕೊಂಡಿದ್ದು, ಐದನೆ ಪಂದ್ಯದಲ್ಲಿ ಆಡಿಸುವ ಕುರಿತು ಇನ್ನೂ ನಿರ್ಧಾರವಾಗಿಲ್ಲ. ಬ್ರಾಡ್ ಇಂಗ್ಲೆಂಡ್‌ನ ಅಂತಿಮ ಅಭ್ಯಾಸದ ವೇಳೆ ತನ್ನ ಫಿಟ್‌ನೆಸ್ ಸಾಬೀತುಪಡಿಸುವ ಸಾಧ್ಯತೆಯಿದೆ.







