ಡಿ.16 ರಂದು ಮಸ್ಜಿದು ತಖ್ವಾದಲ್ಲಿ ಮೌಲೀದ್
ಮಂಗಳೂರು, ಡಿ. 15: ಇಸ್ಲಾಮಿಕ್ ಕಲ್ಚರಲ್ ಸೆಂಟರ್ ಅಧೀನದ ಪಂಪ್‌ವೆಲ್‌ನಲ್ಲಿರುವ ಱಮಸ್ಜಿದು ತಖ್ವಾೞದಲ್ಲಿ ಪ್ರವಾದಿ ಮುಹಮ್ಮದ್ (ಸ.ಅ.) ಸ್ಮರಣಾರ್ಥ ಡಿ.16ರಂದು ಸಂಜೆ 6:30ಕ್ಕೆ ವೌಲೀದ್ ಪಾರಾಯಣ ನಡೆಯಲಿದೆ. ಸೈಯದ್ ಕೆ.ಎಸ್.ಆಟಕೋಯ ತಂಙಳ್ ಕುಂಬೋಳ್ ನೇತೃತ್ವ ವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಪಿ.ಎಂ.ಇಬ್ರಾಹೀಂ ಮುಸ್ಲಿಯಾರ್ ಬೇಕಲ್, ಅಬ್ಬಾಸ್ ಉಸ್ತಾದ್ ಮಂಜನಾಡಿ, ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಹಾಗೂ ಇತರ ಧಾರ್ಮಿಕ ನೇತಾರರು ಭಾಗವಹಿಸಲಿದ್ದಾರೆ ಎಂದು ಸೆಂಟರ್‌ನ ಪ್ರಧಾನ ಕಾರ್ಯದರ್ಶಿ ಬಿ.ಎಂ.ಮುಮ್ತಾಝ್ ಅಲಿ ತಿಳಿಸಿದ್ದಾರೆ.
Next Story





