ಪೊಲಿಪು: ಆಧ್ಯಾತ್ಮಿಕ ಮಜ್ಲಿಸ್ ಕಾರ್ಯಕ್ರಮ
ಕಾಪು, ಡಿ.15: ಪೊಲಿಪು ಜಾಮೀಯ ಮಸೀದಿಯ ಅಧೀನದಲ್ಲಿರುವ ಕುವ್ವತ್ತುಲ್ ಇಸ್ಲಾಂ ಯಂಗ್‌ಮೆನ್ ಅಸೋಸಿಯೇಶನ್ ಇದರ 26ನೆ ವಾರ್ಷಿಕೋತ್ಸವ ಪ್ರಯುಕ್ತ ಆಧ್ಯಾತ್ಮಿಕ ಮಜ್ಲಿಸ್ ಕಾರ್ಯಕ್ರಮವು ಇತ್ತೀಚೆಗೆ ನಡೆಯಿತು.
ಸಯ್ಯದ್ ಜಮಲುಲೈಲಿ ಕಾಜೂರು ತಂಙಳ್ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಶೀರ್ ಹುಸೇನ್ ವಹಿಸಿದ್ದರು. ಕೊಳಕೆ ಮುಹಿಯ್ಯುದ್ದೀನ್ ಜುಮಾ ಮಸೀದಿಯ ಖತೀಬ್ ಬದ್ರುದ್ದೀನ್ ಅಹ್ಸನಿ ಉಪನ್ಯಾಸ ನೀಡಿದರು.
ಕಾಪು ಉಸ್ತಾದ್ ಪಿ.ಬಿ.ಅಹಮದ್ ಮುಸ್ಲಿಯಾರ್ ದುವಾ ನೆರವೇರಿಸಿ ದರು. ಖತೀಬ್ ಇರ್ಷಾದ್ ಸಅದಿ ಉದ್ಘಾಟಿಸಿದರು.
ರಾಜ್ಯ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಎ.ಗಫೂರ್, ಕಾಪು ಪುರಸಭೆ ನಾಮ ನಿರ್ದೇಶಿತ ಸದಸ್ಯ ಅಮೀರ್ ಮೊಹಮ್ಮದ್, ಮೇಸ್ತ್ರಿ ಉಮರಬ್ಬ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಮಸೀದಿ ಕಮಿಟಿಯ ಅಧ್ಯಕ್ಷ ಎಚ್.ಮುಹಮ್ಮದ್, ಕಾರ್ಯದರ್ಶಿ ಆರೀಫ್ ಕಲ್ಯ ಉಪಸ್ಥಿತರಿದ್ದರು. ಜೊತೆ ಕಾರ್ಯದರ್ಶಿ ಶಬೀರ್ ಮೊಹ ಮ್ಮದ್ ಸ್ವಾಗತಿಸಿದರು. ಕಾರ್ಯದರ್ಶಿ ಅಕ್ರಂ ಕಾರ್ಯಕ್ರಮ ಸಂಘಟಿಸಿದರು.
Next Story





