ಕಾಮಿಡಿಗೆ ಜೈ ಎಂದ ಸಲ್ಮಾನ್

ಬಾಕ್ಸ್‌ಆಫೀಸ್ ಸುಲ್ತಾನ್ ಸಲ್ಮಾನ್‌ಖಾನ್, ಕಾಮಿಡಿ ಚಿತ್ರವೊಂದರಲ್ಲಿ ಅಭಿನಯಿಸಲು ಸಜ್ಜಾಗುತ್ತಿದ್ದಾರೆ. 90ರ ದಶಕದಲ್ಲಿ ಹಲವಾರು ಕಾಮಿಡಿ ಚಿತ್ರಗಳಲ್ಲಿ ನಟಿಸಿದ್ದ ಸಲ್ಮಾನ್ ಇತ್ತೀಚಿನ ವರ್ಷಗಳಲ್ಲಿ ಆ್ಯಕ್ಷನ್ ಹಾಗೂ ಸೆಂಟಿಮೆಂಟಲ್ ಚಿತ್ರಗಳಲ್ಲೇ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ. ಈಗ ಸಲ್ಮಾನ್ ಮತ್ತೆ ಕಾಮಿಡಿ ಪಾತ್ರದಲ್ಲಿ ತನ್ನ ಕಮಾಲ್ ತೋರಿಸಲು ಮನಸ್ಸು ಮಾಡಿದ್ದಾರೆ. ಪ್ರೇಕ್ಷಕರನ್ನು ನಗಿಸುವುದು ಅಷ್ಟೇನೂ ಸುಲಭವಲ್ಲ. ಅದೊಂದು ಸವಾಲಿನ ಕೆಲಸವೆಂದು ಸಲ್ಮಾನ್ ಹೇಳುತ್ತಾರೆ. ಬಹಳ ಸಮಯದಿಂದ ತಾನು ಕಾಮಿಡಿ ಚಿತ್ರಗಳಲ್ಲಿ ನಟಿಸುವುದನ್ನು ಮಿಸ್ ಮಾಡಿಕೊಂಡಿದ್ದೇನೆ.
ಈಗ ತನಗೆ ಮತ್ತೊಮ್ಮೆ ಹಾಸ್ಯ ಚಿತ್ರದಲ್ಲಿ ನಟಿಸಬೇಕೆಂಬ ಮನಸ್ಸಾಗಿದೆಯೆಂದು ಸಲ್ಮಾನ್ ಹೇಳಿಕೊಂಡಿದ್ದಾರೆ.
ಯಾವ ಪಾತ್ರಗಳನ್ನೂ ಲೀಲಾಜಾಲವಾಗಿ ನಿರ್ವಹಿಸಿ, ಪ್ರೇಕ್ಷಕರ ಮನಗೆಲ್ಲಬಲ್ಲ ಸಲ್ಮಾನ್ ಮತ್ತೊಮ್ಮೆ ಕಾಮಿಡಿ ಪಾತ್ರದಲ್ಲಿ ಕಾಣಿಸಿಕೊಳ್ಳುವ ಇಚ್ಛೆ ವ್ಯಕ್ತಪಡಿಸಿರುವುದು ಬಾಲಿವುಡ್‌ನಲ್ಲಿ ಸಾಕಷ್ಟು ಕುತೂಹಲ ಕೆರಳಿಸಿದೆ.
ಸದ್ಯಕ್ಕೆ ಸಲ್ಮಾನ್ ಖಾನ್, ಕಳೆದ ಮೂರು ತಿಂಗಳಿಂದ ತನ್ನ ನೂತನ ಚಿತ್ರ ಟ್ಯೂಬ್‌ಲೈಟ್‌ನ ಶೂಟಿಂಗ್‌ಗಾಗಿ ಲಢಾಕ್‌ನಲ್ಲಿ ಬೀಡುಬಿಟ್ಟಿದ್ದಾರೆ. ಈ ಚಿತ್ರವು 2017ರಲ್ಲಿ ಬೆಳ್ಳಿತೆರೆಗೆ ಅಪ್ಪಳಿಸಲಿದೆ.







