‘ಧಂಗಾಲ್’ ತಮಿಳು ಡಬ್ಬಿಂಗ್ ಗೆ ಒಲ್ಲದ ರಜನಿ

ಬಾಲಿವುಡ್‌ನ ಮಿಸ್ಟರ್ ಫರ್‌ಫೆಕ್ಟ್ ಆಮಿರ್ ಖಾನ್ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಧಂಗಾಲ್’ ಚಿತ್ರದ ರಿಲೀಸ್‌ಗೆ ದಿನಗಣನೆ ಆರಂಭವಾಗಿದ್ದು, ಅಭಿಮಾನಿಗಳ ಹೃದಯಬಡಿತವನ್ನು ಹೆಚ್ಚಿಸಿದೆ. ಅಂದಹಾಗೆ ಈ ಚಿತ್ರದ ತಮಿಳು ಹಾಗೂ ತೆಲುಗು ಡಬ್ಬಿಂಗ್ ಅವತರಣಿಕೆಗಳು ಕೂಡಾ ಜೊತೆಜೊತೆಯಾಗಿಯೇ ಬಿಡುಗಡೆಯಾಗಲಿದೆ. ಆದರೆ ಚಿತ್ರದ ತಮಿಳು ಡಬ್ಬಿಂಗ್ ಕಂಠದಾನ ಮಾಡಲು ರಜನಿಕಾಂತ್ ನಿರಾಕರಿಸಿದ್ದರೆಂಬ ಸುದ್ದಿಯೊಂದು ಈಗ ಬಹಿರಂಗವಾಗಿದೆ.
ಆಮಿರ್‌ಖಾನ್, ರಜನಿಕಾಂತ್ ಅವರಿಗಾಗಿಯೇ ‘ಧಂಗಾಲ್’ನ ವಿಶೇಷ ಪ್ರದರ್ಶನ ಏರ್ಪಡಿಸಿದ್ದರು. ಚಿತ್ರದ ತಮಿಳು ಡಬ್ಬಿಂಗ್‌ನಲ್ಲಿ ತನ್ನ ಪಾತ್ರಕ್ಕೆ ಕಂಠದಾನ ಮಾಡುವಂತೆ ಆಮಿರ್‌ಖಾನ್ ರಜನಿಕಾಂತ್ ಅವರನ್ನು ಈ ಸಂದರ್ಭದಲ್ಲಿ ಕೋರಿದ್ದರಂತೆ. ರಜನಿ ಚಿತ್ರವನ್ನು ಮನಸಾರೆ ಹೊಗಳಿದರಾದರೂ, ಅತ್ಯಂತ ವಿನಯಪೂರ್ವಕವಾಗಿ ಆಮಿರ್‌ರ ಈ ಕೋರಿಕೆಯನ್ನು ನಿರಾಕರಿಸಿದರೆನ್ನಲಾಗಿದೆ.
ಪ್ರಾಯಶಃ ತನ್ನ ಎಂದಿರನ್ 2.0 ಬಿಡುಗಡೆಗೆ ಸನ್ನಿಹಿತವಾಗಿರುವುದರಿಂದ ರಜನಿ ತುಸು ಬ್ಯುಸಿಯಾಗಿರಬಹುದು. ಈ ಹಿನ್ನೆಲೆಯಲ್ಲಿ ರಜನಿ ತಮಿಳು ಢಂಗಾಲ್‌ಗೆ ಡಬ್ಬಿಂಗ್ ಮಾಡಲು ನಿರಾಕರಿಸಿರಬೇಕೆಂದು, ಅವರ ನಿಕಟವರ್ತಿ ಮೂಲಗಳ ಅಂಬೋಣ. ಈ ಹಿಂದೆ ಎಂದಿರನ್ 2.0ನಲ್ಲಿ ವಿಲನ್ ಪಾತ್ರ ನಿರ್ವಹಿಸುವಂತೆ ಆಮಿರ್ ಅವರನ್ನು ಕೇಳಲಾಗಿತ್ತು. ಆದರೆ ಆಮಿರ್ ಅದಕ್ಕೆ ಒಪ್ಪಿರಲಿಲ್ಲ. ಆನಂತರ ಆ ಪಾತ್ರವು ಇನ್ನೋರ್ವ ಜನಪ್ರಿಯ ಬಾಲಿವುಡ್ ನಟ ಅಕ್ಷಯ್ ಕುಮಾರ್ ಪಾಲಾಗಿತ್ತು.







