ಕಿರಿಕ್‌ಪಾರ್ಟಿ' ಹಾಡು ಸಖತ್ ಹಿಟ್

ನಟ,ನಿರ್ದೇಶಕನಾಗಿ ಸ್ಯಾಂಡಲ್‌ವುಡ್‌ನಲ್ಲಿ ತನ್ನದೇ ಆದ ಇಮೇಜ್ ಸೃಷ್ಟಿಸಿ ಕೊಂಡಿರುವ ರಕ್ಷಿತ್ ಶೆಟ್ಟಿಯ ಮುಂದಿನ ಚಿತ್ರ ‘ಕಿರಿಕ್ ಪಾರ್ಟಿ’ ತನ್ನ ಹಾಡುಗಳಿಂದಲೇ ಕನ್ನಡ ಸಿನಿರಸಿಕರನ್ನು ಮೋಡಿ ಮಾಡುತ್ತಿದೆ. ಈ ಚಿತ್ರದ ಹಾಡೊಂದು ಯೂಟ್ಯೂಬ್‌ನಲ್ಲಿ ಭಾರೀ ಜನಪ್ರಿಯವಾಗಿದ್ದು, ಪ್ರಸಾರವಾದ ಎರಡನೆ ದಿನದಲ್ಲಿ ಒಂದು ಲಕ್ಷಕ್ಕೂ ಅಧಿಕ ಹಿಟ್ ್ಸಗಳನ್ನು ಪಡೆದುಕೊಂಡಿದೆ.
‘ತಿರುಬೋಕಿ ಜೀವನ...’ ಎಂಬ ಸಾಲಿನೊಂದಿಗೆ ಆರಂಭವಾಗುವ ಈ ಹಾಡನ್ನು ಸ್ವತಃ ರಕ್ಷಿತ್ ಶೆಟ್ಟಿ ಅವರೇ ಬರೆದಿದ್ದಾರೆ. ಅಜನೀಶ್ ಲೋಕೇಶ್ ಈ ಹಾಡನ್ನು ಹಾಡಿರುವುದರ ಜೊತೆಗೆ ಸಂಗೀತ ಸಂಯೋಜಿಸಿದ್ದಾರೆ. ಈ ಹಾಡಿಗೆ ದೊರೆತಿರುವ ಅದ್ಭುತ ಪ್ರತಿಕ್ರಿಯೆಯಿಂದ ‘ಕಿರಿಕ್ ಪಾರ್ಟಿ ’ ಸಖತ್ ಥ್ರಿಲ್ ಆಗಿದೆ.
ರೋಮ್ಯಾಂಟಿಕ್ ಕಾಮಿಡಿ ಚಿತ್ರವಾದರೂ ಸಾಕಷ್ಟು ಭಾವನಾತ್ಮಕ ಅಂಶಗಳೂ ಇದ್ದು, ಪ್ರೇಕ್ಷಕರಿಗೆ ಖಂಡಿತವಾಗಿಯೂ ಇಷ್ಟವಾಗಲಿದೆಯೆಂಬ ಆತ್ಮವಿಶ್ವಾಸವನ್ನು ಚಿತ್ರತಂಡ ಹೊಂದಿದೆ. ಚಿತ್ರದಲ್ಲಿ ರಕ್ಷಿತ್‌ಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ.
ಎಲ್ಲಾ ಸರಿಹೋದಲ್ಲಿ ಕಿರಿಕ್‌ಪಾರ್ಟಿಯನ್ನು ಡಿಸೆಂಬರ್ 30ರಂದೇ ಬಿಡುಗಡೆ ಗೊಳ್ಳಲಿದ್ದು, ಹೊಸವರ್ಷಾಚರಣೆಗೆ ರಂಗೇರಿಸಲಿದೆ.





