ಮನಪಾ ಬಜೆಟ್: ಸುರತ್ಕಲ್‌ನಲ್ಲಿ ನಾಳೆ ಸಭೆ
ಮಂಗಳೂರು ಡಿ.15: ಮಂಗಳೂರು ಮಹಾನಗರಪಾಲಿಕೆಯ 2017-18ನೆ ಸಾಲಿನ ಆಯವ್ಯಯ ತಯಾರಿಸಲು ಕೆ.ಎಂ.ಸಿ ಕಾಯ್ದೆಯಂತೆ ಸಾರ್ವ ಜನಿಕರಿಂದ ಹಾಗೂ ಸರಕಾರೇತರ ಸಂಘ ಸಂಸ್ಥೆಗಳಿಂದ ಅಮೂಲ್ಯ ಸಲಹೆ ಗಳನ್ನು ಪಡೆಯಬೇಕಾಗಿದ್ದು, ಮನಪಾ ಸುರತ್ಕಲ್ ಉಪ ಕಚೇರಿ ವ್ಯಾಪ್ತಿಯ ಸಾರ್ವಜನಿಕರಿಂದ ಸಲಹೆ ಪಡೆಯಲು ಡಿ.17 ರಂದು ಅಪರಾಹ್ನ 3:30ಕ್ಕೆ ಸುರತ್ಕಲ್ ಉಪ ಕಚೇರಿಯಲ್ಲಿ ಸಭೆ ಕರೆಯಲಾಗಿದೆ.
ಸಾರ್ವಜನಿಕರು ಹಾಜರಿದ್ದು ಪಾಲಿಕೆಯ 2017-18 ಸಾಲಿನ ಬಜೆಟ್ ತಯಾರಿಕೆಗೆ ತಮ್ಮ ಸಲಹೆಗಳನ್ನು ನೀಡುವಂತೆ ಮನಪಾ ಆಯುಕ್ತರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





