Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಲಜ್ಜೆಯಿಲ್ಲದವರನ್ನು ಶಿಕ್ಷಿಸುವುದು...

ಲಜ್ಜೆಯಿಲ್ಲದವರನ್ನು ಶಿಕ್ಷಿಸುವುದು ಹೇಗೆ?

ವಾರ್ತಾಭಾರತಿವಾರ್ತಾಭಾರತಿ15 Dec 2016 11:57 PM IST
share
ಲಜ್ಜೆಯಿಲ್ಲದವರನ್ನು ಶಿಕ್ಷಿಸುವುದು ಹೇಗೆ?

ಲಜ್ಜೆ ಕಳೆದುಕೊಂಡ ಮನುಷ್ಯನನ್ನು ಯಾವ ಜೈಲೂ ಶಿಕ್ಷಿಸಲಾರದು ಎನ್ನುವ ಮಾತಿದೆ. ಸದ್ಯದ ರಾಜಕೀಯ ನಾಯಕರ ಮತ್ತು ಮಾಧ್ಯಮಗಳ ನಡೆಗಳು ಲಜ್ಜೆ ಕಳೆದುಕೊಂಡವರ ದುರಂತದ ಆಳವನ್ನು ತಿಳಿಸುತ್ತಿದೆ. ಮೇಟಿಯ ರಾಸಲೀಲೆ ಪ್ರಕರಣ ಅದಕ್ಕೊಂದು ಉತ್ತಮ ಉದಾಹರಣೆಯಾಗಿದೆ. ಈವರೆಗೆ ತನ್ನನ್ನು ತಾನು ಸಾಚಾ ಎಂದೇ ಮಾಧ್ಯಮಗಳಲ್ಲಿ ಬಿಂಬಿಸಿಕೊಂಡು ಬಂದು, ಆರೋಪಗಳನ್ನೆಲ್ಲ ಯಾವ ನಾಚಿಕೆಯೂ ಇಲ್ಲದೆ ನಿರಾಕರಿಸುತ್ತಿದ್ದ ಅಬಕಾರಿ ಸಚಿವ ಎಚ್. ವೈ. ಮೇಟಿ, ತನ್ನ ಲೀಲೆಗಳು ಟಿವಿ ಚಾನೆಲ್‌ಗಳಲ್ಲಿ ರಾರಾಜಿಸತೊಡಗಿದಂತೆಯೇ ರಾಜೀನಾಮೆ ಎಸೆದು ಮನೆಗೆ ತೆರಳಿದ್ದಾರೆ. ತನ್ನ ನಾಚಿಕೆಗೆಟ್ಟ ಸಚಿವನನ್ನು ಕೊನೆಯವರೆಗೂ ಸಮರ್ಥಿಸುತ್ತಾ ಬಂದ, ರಕ್ಷಿಸಲು ಮುಂದಾಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಾಯಿಗೀಗ ಬೀಗ ಬಿದ್ದಿದೆ. ಸಿಡಿ ತನ್ನ ದುರ್ನಾತವನ್ನು ರಾಜ್ಯವಿಡೀ ಪಸರಿಸತೊಡಗಿದಂತೆಯೇ ಮೇಟಿಯವರನ್ನು ಕರೆದು ಅವರಿಗೆ ಛೀಮಾರಿ ಹಾಕಿ ಮನೆಗೆ ಕಳುಹಿಸಿದ್ದಾರೆ. ಇದನ್ನೇ ಮೂರು ದಿನಗಳ ಹಿಂದೆಯೇ ಮಾಡಿದ್ದಿದ್ದರೆ ಒಂದಿಷ್ಟು ಸರಕಾರದ ವರ್ಚಸ್ಸಾದರೂ ಉಳಿಯುತ್ತಿತ್ತೇನೋ. ಆದರೆ ಕೊನೆಯವರೆಗೂ ಅವರನ್ನು ಉಳಿಸಲು ಯತ್ನಿಸಿದ ಕಾರಣಕ್ಕಾಗಿಯೇ ಇಂದು ಮೇಟಿಯ ಕಳಂಕವನ್ನು ಸರಕಾರ ತಾನೂ ಹೊತ್ತುಕೊಳ್ಳಬೇಕಾಗಿ ಬಂದಿದೆ

ಮಹಿಳೆಯ ಒಪ್ಪಿಗೆಯಿಂದಲೇ ಮೇಟಿ ಈ ಅನೈತಿಕ ಚಟುವಟಿಕೆಯಲ್ಲಿ ಭಾಗಿಯಾಗಿರಬಹುದು. ಈ ಕಾರಣದಿಂದ ಇದು ಮೇಟಿಯ ತೀರಾ ಖಾಸಗಿ ವಿಷಯ ಎಂದು ನಾವು ಚರ್ಚಿಸದೇ ಇರುವಂತಿಲ್ಲ. ಯಾಕೆಂದರೆ ಸಾರ್ವಜನಿಕವಾಗಿ ಪ್ರಮುಖ ಸ್ಥಾನದಲ್ಲಿರುವ ವ್ಯಕ್ತಿ, ತನ್ನ ಚಾರಿತ್ರದ ಕುರಿತಂತೆ ಸದಾ ಜಾಗರೂಕನಾಗಿರಬೇಕು. ಮೇಟಿಯಂತಹ ಹಿರಿಯ ನಾಗರಿಕರಿಂದ ಜನರು ಇದನ್ನು ತುಸು ಅತಿಯಾಗಿಯೇ ನಿರೀಕ್ಷಿಸುತ್ತಾರೆ. ಅವರು ಸಾರ್ವಜನಿಕರಿಗೆ ಮಾದರಿಯಾಗದೇ ಇದ್ದರೂ ಪರವಾಗಿಲ್ಲ, ಸಾರ್ವಜನಿಕರು ಅವರಿಂದಾಗಿ ಮುಖಮುಚ್ಚಿಕೊಳ್ಳುವಂತಾಗಬಾರದು. ಹೀಗಿರುವಾಗ, ಈ ಅನೈತಿಕ ಸಂಬಂಧವನ್ನು ‘ಖಾಸಗಿ’ತನದ ಹೆಸರಿನಲ್ಲಿ ಮುಚ್ಚಿ ಹಾಕುವುದು ಲಜ್ಜೆಗೇಡಿತನವಾಗುತ್ತದೆ. ಇಷ್ಟಕ್ಕೂ ಒಳಗಿನ ಭ್ರಷ್ಟತನ ಹೊರಗಿನ ಭ್ರಷ್ಟತನ ಬೇರೆ ಬೇರೆಯಲ್ಲ. ಒಬ್ಬ ನಾಯಕ, ಹೊರಗೆ ಕೆಟ್ಟು ಕೊಳೆತ ಆನಂತರವೇ ಒಳಗೂ ಕೊಳೆಯತೊಡಗುತ್ತಾನೆ. ಅಬಕಾರಿಯಂತಹ ಲಾಭದಾಯಕ ಹುದ್ದೆಯಲ್ಲಿರುವ ಮೇಟಿ, ಒಳಗೆ ಇಷ್ಟರ ಮಟ್ಟಿಗೆ ಕೊಳೆತಿರಬೇಕಾದರೆ, ಹೊರಗೆ ಅದೆಷ್ಟು ಕೊಳೆತಿರಬಹುದು ಎಂಬ ಪ್ರಶ್ನೆ ಇದೀಗ ಹುಟ್ಟುತ್ತದೆ.

ಮೇಟಿ ಪ್ರಕರಣ ಮೇಲ್ನೋಟಕ್ಕೆ ಒಂದು ಸಂಚು ಎನ್ನುವುದನ್ನು ಹೇಳುತ್ತದೆ. ಸಿಡಿ ಒಂದು ಆಕಸ್ಮಿಕವಲ್ಲ. ಈ ಪ್ರಕರಣದಲ್ಲಿ ಮಹಿಳೆ ಭಾಗಿಯಾಗಿದ್ದಾರೆಯೋ ಇಲ್ಲವೋ ಎನ್ನುವುದು ತನಿಖೆಯಿಂದಷ್ಟೇ ತಿಳಿದು ಬರಬೇಕು. ಆದರೆ ಇದರಲ್ಲಿ ಭಾಗಿಯಾಗಿರುವ ಇತರರು ಯಾವ ರೀತಿಯಲ್ಲೂ ಆರ್‌ಟಿಐ ಕಾರ್ಯಕರ್ತರೆಂದು ಕರೆದುಕೊಳ್ಳುವಂತಹ ಯೋಗ್ಯತೆಯನ್ನು ಹೊಂದಿಲ್ಲ. ಅವರು ಇನ್ನೊಬ್ಬರ ಖಾಸಗಿ ಜೀವನವನ್ನು ಚಿತ್ರೀಕರಿಸಿ, ಅವರನ್ನು ಬ್ಲಾಕ್‌ಮೇಲ್ ಮಾಡಲು ಉದ್ದೇಶಿಸಿದ್ದಾರೆ. ಈಗಾಗಲೇ ಮೇಟಿಯವರಿಂದ ಸಾಕಷ್ಟು ಹಣವನ್ನು ದೋಚಿರುವ ಸಾಧ್ಯತೆಯೂ ಇದೆ. ದೊಡ್ಡ ಮೊತ್ತವೊಂದನ್ನು ಅವರಿಂದ ಪಡೆಯಲು ಯತ್ನಿಸಿದಾಗ ಇಬ್ಬರ ನಡುವೆ ವ್ಯವಹಾರ ಮುರಿದು ಬಿದ್ದಿರುವ ಸಾಧ್ಯತೆಗಳಿವೆ. ಇಂದು ಆರ್‌ಟಿಐ ಕಾರ್ಯಕರ್ತರ ವೇಷದಲ್ಲಿ ಬ್ಲಾಕ್‌ಮೇಲ್ ಮಾಡುವವರ ಸಂಖ್ಯೆ ಹೆಚ್ಚುತ್ತಿವೆ. ಇಲ್ಲಿ, ಸಿಡಿಯನ್ನು ಮುಂದಿಟ್ಟುಕೊಂಡು ತನ್ನನ್ನು ತಾನು ಆರ್‌ಟಿಐ ಕಾರ್ಯಕರ್ತ ಎಂದು ಕರೆದುಕೊಂಡಾತ ಮೇಲ್ನೋಟಕ್ಕೇ ಬ್ಲಾಕ್‌ಮೇಲರ್ ಎನ್ನುವುದು ಗೊತ್ತಾಗಿ ಬಿಡುತ್ತದೆ. ಈ ಸಿಡಿ ಯಾವುದೇ ಸಾಮಾಜಿಕ ಬದ್ಧತೆಯನ್ನು ಹೊಂದಿಲ್ಲ. ಅಬಕಾರಿ ಸಚಿವ ಯಮನಪ್ಪ ಮೇಟಿಯವರಿಗೆ ಈಗಾಗಲೇ ತಮ್ಮ ಕೃತ್ಯಕ್ಕೆ ನೇರ ಶಿಕ್ಷೆಯಾಗಿದೆ. ಸಚಿವ ಸ್ಥಾನವನ್ನು ಕಳೆದುಕೊಂಡಿದ್ದಾರೆ ಮಾತ್ರವಲ್ಲ, ಸಾರ್ವಜನಿಕವಾಗಿಯೂ ತಮ್ಮ ವರ್ಚಸ್ಸನ್ನು ಕಳೆದುಕೊಂಡಿದ್ದಾರೆ. ಅವರೊಳಗೆ ಒಂದಿಷ್ಟು ನಾಚಿಕೆ ಉಳಿದಿದೆಯಾದರೆ ಈ ಶಿಕ್ಷೆ ಅವರನ್ನು ಜೀವಮಾನ ಪೂರ್ತಿ ಕಾಡೀತು. ಇದೇ ಸಂದರ್ಭದಲ್ಲಿ ಸಚಿವರ ಈ ಖಾಸಗಿ ಅಸಹ್ಯವನ್ನು ಚಿತ್ರೀಕರಿಸಿ ಹಣ ದೋಚಲು ಯತ್ನಿಸಿದ ನಕಲಿ ಆರ್‌ಟಿಐ ಕಾರ್ಯಕರ್ತನನ್ನೂ ಅವನ ಜೊತೆಗಿದ್ದವರನ್ನೂ ವಿಚಾರಣೆ ನಡೆಸಬೇಕು ಮತ್ತು ಅವರ ಮೇಲೆ ಕ್ರಮ ಕೈಗೊಳ್ಳಬೇಕು. ಇವೆಲ್ಲದರ ನಡುವೆ ಮೇಟಿ ಪ್ರಕರಣದಲ್ಲಿ ಕೆಲವು ಚಾನೆಲ್‌ಗಳು ಮೇಟಿಯನ್ನು ಮೀರಿ ತಮ್ಮ ಅನೈತಿಕ ಪತ್ರಿಕೋದ್ಯಮವನ್ನು ನಡೆಸಿತು.

ಒಬ್ಬ ರಾಜಕಾರಣಿ ಸಾರ್ವಜನಿಕವಾಗಿ ತನ್ನ ಚಾರಿತ್ರವನ್ನು ಉಳಿಸಿಕೊಳ್ಳಬೇಕು ಎಂದು ಬಯಸುವ ಈ ಚಾನೆಲ್‌ಗಳು, ಸುದ್ದಿ ಪ್ರಸಾರದ ಸಮಯದಲ್ಲಿ ತನ್ನ ಚಾರಿತ್ರವನ್ನೇ ಕಳೆದುಕೊಂಡಿತು. ರಾಸಲೀಲೆಯ ಸಿಡಿಯನ್ನು ಸಾಂಕೇತಿಕವಾಗಿ ತೋರಿಸುವ ಬದಲು, ಇಡೀ ಸಿಡಿಯನ್ನೇ ಯಾವುದೇ ರೀತಿ ಮಸುಕು ಮಾಡದೇ, ವೀಕ್ಷಕರನ್ನು ಮುಜುಗರಕ್ಕೆ ಕೆಡವಿತು. ಮನೆ ಮಂದಿಯೆಲ್ಲ ಈ ಚಾನೆಲ್‌ಗಳಿಗೆ ಥೂ, ಛೀ ಎಂದು ಉಗಿಯುವಂತಾಯಿತು. ಒಂದು ರೀತಿಯಲ್ಲಿ, ಮೇಟಿ ಖಾಸಗಿಯಾಗಿ ಕತ್ತಲ ಕೋಣೆಯಲ್ಲಿ ಏನನ್ನು ಮಾಡಿದರೋ ಅದನ್ನೇ ಈ ಚಾನೆಲ್‌ಗಳು ಬಹಿರಂಗವಾಗಿ ಯಾವ ಲಜ್ಜೆಯೂ ಇಲ್ಲದೆ ಮಾಡಿದವು. ರಾಜಕಾರಣಿಗಳಿಗೆ ನೈತಿಕತೆಯನ್ನು ಬೋಧಿಸುವ ಚಾನೆಲ್‌ಗಳಿಗೇಕೆ ಈ ನೈತಿಕತೆ ಅನ್ವಯವಾಗುವುದಿಲ್ಲ. ಈ ಪ್ರಕರಣದಲ್ಲಿ ಒಬ್ಬ ಮಹಿಳೆಯೂ ಸಿಕ್ಕಿ ಹಾಕಿಕೊಂಡಿದ್ದಾರೆ. ರಾಜಕಾರಣಿಯ ಚಪಲಕ್ಕೆ ಆಕೆಯೂ ಬಲಿಯಾಗಿದ್ದಾರೆ. ಬಹುಶಃ ಹಣದಾಸೆಗೆ ಆಕೆ ಬಲಿಯಾಗಿ ಈತನ ಜೊತೆಗಿರಲು ಒಪ್ಪಿರಬಹುದು. ಇಂದು ಟಿವಿಯ ಮೂಲಕ ಆಕೆಯ ಸ್ಥಿತಿಯನ್ನು ಇಡೀ ನಾಡು ನೋಡಿದೆ. ನಾಳೆಯಿಂದ ಆಕೆ ಹೇಗೆ ಬದುಕಬೇಕು? ಯಾವುದೋ ತುರ್ತು ಹಣದ ಕಾರಣಕ್ಕಾಗಿ ಆಕೆ ಇಂತಹದೊಂದು ಸ್ಥಿತಿಗೆ ಇಳಿದಿರುವ ಸಾಧ್ಯತೆಯೂ ಇದೆ. ಒಂದು ವೇಳೆ ಆಕೆಗೆ ಕುಟುಂಬ ಮಕ್ಕಳು ಎಂದು ಇದ್ದರೆ ಅವರಾದರೂ ಸಮಾಜದಲ್ಲಿ ತಲೆಯೆತ್ತಿ ಬದುಕುವುದು ಹೇಗೆ? ನಾಳೆ ಮಹಿಳೆ ಅವಮಾನದಿಂದ ಆತ್ಮಹತ್ಯೆಯಂತಹ ಕೃತ್ಯಕ್ಕೆ ಇಳಿದರೆ ಅದಕ್ಕೆ ಪರೋಕ್ಷವಾಗಿ ಟಿವಿ ಚಾನೆಲ್‌ಗಳೂ ಕಾರಣವಾಗುವುದಿಲ್ಲವೇ? ಮೇಟಿಯ ಕೃತ್ಯ ತಪ್ಪೋ ಸರಿಯೋ ಎನ್ನುವುದು ಆನಂತರ ಚರ್ಚೆಯಾಗಲಿ. ಮೊತ್ತ ಮೊದಲು, ಚಾನೆಲ್‌ಗಳು ಮಾಡಿರುವ ಕೃತ್ಯ ಎಷ್ಟರಮಟ್ಟಿಗೆ ಸರಿ ಎನ್ನುವುದು ಚರ್ಚೆಯ ಮುನ್ನೆಲೆಗೆ ಬರಬೇಕಾಗಿದೆ.

ಇಂದು ಸುದ್ದಿ ಚಾನೆಲ್‌ಗಳೇ ಧಾರ್ಮಿಕ ಚಾನೆಲ್‌ಗಳ ನೇತೃತ್ವವನ್ನೂ ವಹಿಸಿಕೊಂಡಿವೆ. ಮುಂಜಾವು ಟಿವಿ ಆನ್ ಮಾಡಿದರೆ ಅಲ್ಲಿ ಪೂಜೆ, ದೇವಸ್ಥಾನ, ಭಜನೆ ಇತ್ಯಾದಿಗಳನ್ನು ಜನರು ಅನಿವಾರ್ಯವಾಗಿ ನೋಡಬೇಕಾಗಿದೆ. ಇದರ ಜೊತೆಗೆ ಜ್ಯೋತಿಷಿಗಳು, ವಾಸ್ತು ಶಾಸ್ತ್ರಜ್ಞರ ಕಾಟ ಬೇರೆ. ಇವರೆಲ್ಲರೂ ಸಮಾಜವನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಗೊತ್ತಿದ್ದೂ ತಮ್ಮ ಲಾಭಕ್ಕಾಗಿ ಚಾನೆಲ್‌ಗಳು ಇವುಗಳನ್ನು ಪ್ರಸಾರ ಮಾಡುತ್ತಿವೆ. ಇದೀಗ, ಸುದ್ದಿಯ ಹೆಸರಿನಲ್ಲಿ ಅಶ್ಲೀಲ ಸಿಡಿಗಳನ್ನೂ ಪ್ರಸಾರ ಮಾಡಲು ಹೊರಟಿವೆ. ಜೊತೆಗೆ ‘ನಾವೇ ಪ್ರಪ್ರಥಮವಾಗಿ ಪ್ರಸಾರ ಮಾಡಿರುವುದು’ ಎಂದು ಹೆಮ್ಮೆಯಿಂದ ಅದನ್ನು ಘೋಷಿಸಿಕೊಳ್ಳುತ್ತಿವೆ. ಈ ಚಾನೆಲ್‌ಗಳ ಅನೈತಿಕತೆಗೆ ಹೋಲಿಸಿದರೆ ಮೇಟಿ ತಮ್ಮ ಖಾಸಗಿ ಕೋಣೆಯಲ್ಲಿ ನಡೆಸಿದ್ದನ್ನು ಒಂದಿಷ್ಟಾದರೂ ಸಹಿಸಿಕೊಳ್ಳಬಹುದು. ಆದರೆ ಆ ಕೋಣೆಯೊಳಗೆ ಗುಟ್ಟಾಗಿ ನಡೆದಿರುವುದನ್ನು ಮನೆಮನೆಗೆ ಹಂಚಿದ ಚಾನೆಲ್‌ಗಳಿಗೆ ಯಾವ ಶಿಕ್ಷೆಯನ್ನು ನೀಡಬೇಕು? ಮತ್ತೆ ಉತ್ತರವಿಲ್ಲದ ಪ್ರಶ್ನೆ. ಲಜ್ಜೆಯಿಲ್ಲದವರನ್ನು ಶಿಕ್ಷಿಸುವ ಬಗೆಯಾದರೂ ಯಾವುದು?

share
ವಾರ್ತಾಭಾರತಿ
ವಾರ್ತಾಭಾರತಿ
Next Story
X