ಇನೋಳಿ : ಅಂಗಡಿಗೆ ನುಗ್ಗಿ ಕಳ್ಳತನ

ಕೊಣಾಜೆ, ಡಿ.16 : ಕೊಣಾಜೆ ಠಾಣಾ ವ್ಯಾಪ್ತಿಯ ಪಾವೂರು ಗ್ರಾಮದ ಇನೋಳಿ ಕಂಬಳಪದವಿನಲ್ಲಿರುವ ವಿಕ್ಟರ್ ಮೊಂತೆರೋ ಎಂಬವರ ಅಂಗಡಿಯಲ್ಲಿ ಗುರುವಾರ ತಡರಾತ್ರಿ ಕಳ್ಳರು ನುಗ್ಗಿ ಕಳ್ಳತನ ನಡೆಸಿರುವ ಘಟನೆ ನಡೆದಿದೆ.
ಕಂಬಳಪದವಿನಲ್ಲಿರುವ ವಿಕ್ಟರ್ ಅವರ ಅಂಗಡಿಯ ಹೆಂಚು ತೆಗೆದು ಕಳ್ಳರು ಒಳಗಡೆ ಇಳಿದಿದ್ದಾರೆ. ಒಳಗಡೆ ಹಾರ್ಡ್‌ಬೋರ್ಡ್‌ನಿಂದ ನಿರ್ಮಸಲಾದ ಮೇಲ್ಛಾವಣಿಯಿದ್ದು, ಅದನ್ನೂ ಮುರಿದಿದ್ದಾರೆ. ಅಂಗಡಿಯಲ್ಲಿದ್ದ ತಿಂಡಿ, ತಿನಿಸುಗಳು ಹಾಗೂ ಮೂರು ಸಾವಿರದಷ್ಟಿದ್ದ ಚಿಲ್ಲರೆ ನಾಣ್ಯಗಳು ಕಳ್ಳತನವಾಗಿವೆ.
ಕಳೆದ ವರ್ಷ ಹಾಗೂ ಹಿಂದಿನ ವರ್ಷವೂ ಈ ಅಂಗಡಿಯಲ್ಲಿ ಕಳ್ಳತನ ನಡೆದಿದ್ದು ಸ್ಥಳಕ್ಕೆ ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲಿಸಿದ್ದಾರೆ.
ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





