ಭಾರತ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ದೇಶ : ಅಮೆರಿಕದ ಅಧ್ಯಕ್ಷರ ವರದಿ
.jpg)
ವಾಶಿಂಗ್ಟನ್, ಡಿ. 16: ಜಗತ್ತಿನ ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಪೈಕಿ ಭಾರತವೂ ಒಂದಾಗಿದೆ ಎಂದು ಅಮೆರಿಕದ ಶ್ವೇತಭವನ ಇಂದು ಹೇಳಿದೆ.
ಆದಾಗ್ಯೂ, ದೇಶದ ಸಾರ್ವಜನಿಕ ಕ್ಷೇತ್ರದ ಉದ್ದಿಮೆಗಳಲ್ಲಿ ಅದಕ್ಷತೆ ನೆಲೆಸಿದೆ ಹಾಗೂ ದೇಶದ ಬಡ ಸಮುದಾಯಕ್ಕೆ ಈಗಲೂ ಆರೋಗ್ಯರಕ್ಷಣೆ ಹಾಗೂ ಆರ್ಥಿಕ ಸೇವೆಗಳು ಸಿಕ್ಕಿಲ್ಲ ಎನ್ನುವುದರತ್ತ ಅದು ಬೆಟ್ಟು ಮಾಡಿದೆ.
‘‘ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಜಗತ್ತಿನ ದೇಶಗಳಲ್ಲಿ ಭಾರತವೂ ಒಂದು. 2016ರ ಮೂರನೆ ತ್ರೈಮಾಸಿಕದವರೆಗಿನ ನಾಲ್ಕು ತ್ರೈಮಾಸಿಕಗಳಲ್ಲಿ ದೇಶದ ಜಿಡಿಪಿ 7.3 ಶೇಕಡ ದರದಲ್ಲಿ ಬೆಳೆಯುತ್ತಿದೆ’’ ಎಂದು 2017ಕ್ಕಾಗಿ ಅಧ್ಯಕ್ಷರು ಸಿದ್ಧಪಡಿಸಿದ ಆರ್ಥಿಕ ವರದಿ ತಿಳಿಸಿದೆ.
ಈ ವರದಿಯನ್ನು ಅಮೆರಿಕದ ಸಂಸತ್ತು ಕಾಂಗ್ರೆಸ್‌ಗೆ ಕಳುಹಿಸಲಾಗಿದೆ.
2016ರ ನಾಲ್ಕು ತ್ರೈಮಾಸಿಕಗಳಲ್ಲಿ ಭಾರತದ ಆರ್ಥಿಕ ಬೆಳವಣಿಗೆ ನಿರೀಕ್ಷಿತ 7.4 ಶೇಕಡ ದರದಲ್ಲಿ ಸಂಭವಿಸುತ್ತಿದೆ ಎಂದು 600 ಪುಟಗಳ ಬೃಹತ್ ವರದಿ ಹೇಳಿದೆ.
Next Story





