ಸುಲ್ತಾನ್‌ಗೋಲ್ಡ್‌ನಲ್ಲಿ ಅಂತಾರಾಷ್ಟ್ರೀಯ ವಜ್ರಾಭರಣಗಳ ಪ್ರದರ್ಶನ

ಮಂಗಳೂರು, ಡಿ. 16 : ನಗರದ ಕಂಕನಾಡಿಯ ಸುಲ್ತಾನ್ ಡೈಮಂಡ್ ಆ್ಯಂಡ್ ಗೋಲ್ಡ್ ಸಂಸ್ಥೆಯು ತನ್ನ ಶೋರೂಂದಲ್ಲಿ ಡಿ.16ರಿಂದ ಜನವರಿ 1ರವರೆಗೆ ಆಯೋಜಿಸಿರುವ ಅಂತಾರಾಷ್ಟ್ರೀಯ ವಜ್ರಾಭರಣಗಳ ಪ್ರದರ್ಶನವು ಇಂದು ಉದ್ಘಾಟನೆಗೊಂಡಿತು.
ವಜ್ರಾಭರಣ ಪ್ರದರ್ಶನದ ಉದ್ಘಾಟನೆಯನ್ನು ಆಸರೆ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷೆ ಡಾ.ಆಶಾ ಜ್ಯೋತಿ ರೈ ಉದ್ಘಾಟಿಸಿದರು.
ವಜ್ರಾಭರಣದ ಗುಮಟ್ಟದವನ್ನು ಪರಿಶೀಲಿಸುವ ಡೈಮಂಡ್ ಗ್ರೇಡಿಂಗ್ ಮೆಶಿನ್‌ನ್ನು ಎಸಿಪಿ ವೆಲೆಂಟೈನ್ ಡಿಸೋಜಾ ಉದ್ಘಾಟಿಸಿದರು.
ನೂತನ ಮಾದರಿಯ ವಿವಿಧ ವಜ್ರಾಭರಣಗಳನ್ನು ರಾಜ್ಯ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಎ.ಗಫೂರ್, ಯೆನೆಪೋಯ ಆಸ್ಪತ್ರೆಯ ಮೆಡಿಕಲ್ ವಿಭಾಗದ ಮುಖ್ಯಸ್ಥೆ ಡಾ.ತಸ್ನೀಮಾ ಎನ್.ಕೆ., ಹಸೀನಾ ನೌಫಲ್, ನೂರಿ ಮನ್ಸೂರ್ ಅಹ್ಮದ್, ನೂರ್‌ಜಹಾನ್ ಅಬೂಬಕರ್ ಬಿಡುಗಡೆಗೊಳಿಸಿದರು.
ಅಂತಾರಾಷ್ಟ್ರೀಯ ಮಟ್ಟದ ಮಾದರಿಯ ವಜ್ರಾಭರಣಗಳಾದ ಇಟಲಿ ಕಲೆಕ್ಷನ್, ಟರ್ಕಿ ಕಲೆಕ್ಷನ್, ಫ್ರಾನ್ಸ್ ಕಲೆಕ್ಷನ್ಸ್, ಬೆಲ್ಜಿಯಂ ಕಲೆಕ್ಷ್ಷನ್ಸ್, ಯು.ಎಸ್.ಕಲೆಕ್ಷನ್ಸ್ ಸಿಂಗಾಪೂರ್ ಕಲೆಕ್ಷನ್ಸ್ ಗಳು ಬಿಡುಗಡೆಗೊಂಡವು.
ಈ ಸಂದರ್ಭದಲ್ಲಿ ಮಾತನಾಡಿದ ಸುಲ್ತಾನ್ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕ ಡಾ.ಟಿ.ಎಂ.ಅಬ್ದುಲ್ ರವೂಫ್ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕ ಟಿ.ಎಂ.ಅಬ್ದುಲ್ ರಹೀಂ ಅವರು ಇಂತಹ ಪ್ರದರ್ಶನವನ್ನು ಮಂಗಳೂರಿಗೆ ಮತ್ತೊಮ್ಮೆ ಪರಿಚಯಿಸಿದ್ದಕ್ಕೆ ಸಂತೋಷವಾಗಿದೆ. ಪ್ರದರ್ಶನದಲ್ಲಿ ವಜ್ರದ ವೌಲ್ಯಗಳ ಮೇಲೆ ಶೇ. 25ರಷ್ಟು ರಿಯಾಯತಿ ನೀಡಲಾಗುವುದು ಎಂದರು.







