ತೀವ್ರ ಪ್ರಾಕೃತಿಕ ವಿಕೋಪಗಳಿಗೆ ಹವಾಮಾನ ಬದಲಾವಣೆ ಕಾರಣ

ಮಯಾಮಿ ( ಅಮೆರಿಕ), ಡಿ. 16: ಕಳೆದ ವರ್ಷ ಯುರೋಪ್ ಮತ್ತು ಏಶ್ಯಗಳಲ್ಲಿ ಕಾಣಿಸಿಕೊಂಡ ಬಿಸಿ ಗಾಳಿ, ಅಲಾಸ್ಕದಲ್ಲಿ ಕಾಣಿಸಿಕೊಂಡ ಬೆಂಕಿ, ಬ್ರಿಟನ್‌ನಲ್ಲಿ ತೀವ್ರತೆ ಕಳೆದುಕೊಂಡ ಚಳಿ ಮತ್ತು ಫ್ಲೋರಿಡಕ್ಕೆ ಅಪ್ಪಳಿಸಿದ ದೈತ್ಯ ಅಲೆಗಳ ಪ್ರವಾಹಗಳಿಗೆ ಹವಾಮಾನ ಬದಲಾವಣೆ ಕಾರಣವಾಗಿದೆ ಎಂದು ಇಲ್ಲಿನ ವರದಿಯೊಂು ಗುರುವಾರ ತಿಳಿಸಿದೆ.
ಆದರೆ, ಅಮೆರಿಕ ಮತ್ತು ಕೆನಡಗಳು ಅನುಭವಿಸುತ್ತಿರುವ ಭೀಕರ ಚಳಿ, ನೈಜೀರಿಯದಲ್ಲಿ ಬೇಸಿಗೆ ಮಳೆಯ ವಿಳಂಬ ಆಗಮನ ಮತ್ತು ಚೆನ್ನೈಯಲ್ಲಿ ಡಿಸೆಂಬರ್‌ನಲ್ಲಿ ಪ್ರತಿದಿನವೆಂಬಂತೆ ಸುರಿಯುತ್ತಿರುವ ಭಾರೀ ಮಳೆಗೆ ಹವಾಮಾನ ವೈಪರೀತ್ಯ ಕಾರಣವೆನ್ನಲಾಗದು ಎಂದು ವರದಿ ಹೇಳಿದೆ.
ವರದಿಯು ‘ಅಮೆರಿಕನ್ ಮೀಟಿಯರಲಾಜಿಕಲ್ ಸೊಸೈಟಿ’ಯ ಬುಲೆಟಿನ್‌ನಲ್ಲಿ ಪ್ರಕಟಗೊಂಡಿದೆ.
ವರದಿ ತಯಾರಿಕೆಯಲ್ಲಿ 18 ದೇಶಗಳ 116 ವಿಜ್ಞಾನಿಗಳು ಭಾಗವಹಿಸಿದ್ದಾರೆ.
Next Story





