ಮಸ್ಜಿದು ತಖ್ವಾದಲ್ಲಿ ಮೌಲೀದ್ ಕಾರ್ಯಕ್ರಮ

ಮಂಗಳೂರು, ಡಿ. 16: ಇಸ್ಲಾಮಿಕ್ ಕಲ್ಚರಲ್ ಸೆಂಟರ್ ಪಂಪ್‌ವೆಲ್ ಮಂಗಳೂರು ಇದರ ಅಧೀನದಲ್ಲಿರುವ ‘ಮಸ್ಜಿದು ತಖ್ವಾ’ದಲ್ಲಿ ಪ್ರವಾದಿ ಮುಹಮ್ಮದ್ (ಸ) ಸ್ಮರಣಾರ್ಥ ಇಂದು ಸಂಜೆ ವೌಲೀದ್ ಪಾರಾಯಣ ನಡೆಯಿತು.
ಕಾರ್ಯಕ್ರಮದ ನೇತೃತ್ವವನ್ನು ಖಾಝಿ ಪಿ.ಎಂ.ಇಬ್ರಾಹೀಂ ಮುಸ್ಲಿಯಾರ್ ಬೇಕಲ್ ವಹಿಸಿದ್ದರು. ದುವಾ ದಾರುಲ್ ಇರ್ಷಾದ್ ಸಂಸ್ಥೆಯ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ದುವಾ ನೆರವೇರಿಸಿದರು.
ಅಲ್ ಮದೀನಾ ಇಸ್ಲಾಮಿಕ್ ಕಾಂಪ್ಲೆಕ್ಸ್‌ನ ಅಬ್ಬಾಸ್ ಉಸ್ತಾದ್ ಮಂಜನಾಡಿ, ಕಂಕನಾಡಿ ಜುಮಾ ಮಸೀದಿಯ ಖತೀಬ್ ಇಸ್ಮಾಯೀಲ್ ಮುಸ್ಲಿಯಾರ್, ಅಬೂಸುಫ್ಯಾನ್ ಉಸ್ತಾದ್, ಮಸ್ಜಿದು ತಖ್ವಾ ಇದರ ಖತೀಬ್ ಅಬ್ದುರ್ರಹ್ಮಾನ್ ಸಖಾಫಿ, ಮುಅಝಿನ್ ಇಬ್ರಾಹೀಂ ಮುಸ್ಲಿಯಾರ್, ಮಸ್ಜಿದು ತಖ್ವಾ ಮಸೀದಿಯ ಅಧ್ಯಕ್ಷ ವೈ.ಅಬ್ದುಲ್ಲಾ ಕುಂಞಿ, ಉಪಾಧ್ಯಕ್ಷರಾದ ಅಜೀಝ್ ಹಸನ್, ಯು.ಕೆ. ಮೋನು ಕಣಚೂರ್, ಮುತಅಲ್ಲಿ ಎಸ್.ಎಂ.ರಶೀದ್ ಹಾಜಿ, ಪ್ರಧಾನ ಕಾರ್ಯದರ್ಶಿ ಬಿ.ಎಂ.ಮುಮ್ತಾಝ್ ಅಲಿ, ಸಮಿತಿ ಸದಸ್ಯರಾದ ಹಮೀದ್ ಕಂದಕ್, ಕೆ.ಮುಹಮ್ಮದ್ ಹಾರಿಸ್, ಬಿ.ಎಂ.ಶೌಕತ್ ಅಲಿ, ಬಶೀರ್ ಅಹ್ಮದ್, ಮುಹಮ್ಮದ್ ಹಾಜಿ, ವ್ಯವಸ್ಥಾಪಕ ಹಸನ್ ಕುಂಞಿ, ಟ್ಯಾಲೆಂಟ್ ರೀಸರ್ಚ್ ಫೌಂಡೇಶನ್‌ನ ರಫೀಕ್ ಮಾಸ್ಟರ್, ಅಶ್ರಫ್ ಕಿನಾರ ಸಹಿತ ಇತರ ಗಣ್ಯರು, ಧಾರ್ಮಿಕ ಮುಖಂಡರು ಮೊದಲಾದವರು ಉಪಸ್ಥಿತರಿದ್ದರು.





