ಕಟಪಾಡಿ: ಬೆಂಕಿಗೆ ಕಾರು ಭಸ್ಮ

ಕಾಪು, ಡಿ.16: ಕಟಪಾಡಿ ಶ್ರೀವೆಂಕಟರಮಣ ದೇವಸ್ಥಾನದ ಎದುರು ಡಿ.16ರಂದು ಮಧ್ಯಾಹ್ನ 2:30ರ ಸುಮಾರಿಗೆ ನಿಲ್ಲಿಸಲಾದ ಕಾರಿನಲ್ಲಿ ಉಂಟಾದ ಆಕಸ್ಮಿಕ ಬೆಂಕಿಯಿಂದ ಸಂಪೂರ್ಣ ಸುಟ್ಟು ಹೋಗಿರುವ ಬಗ್ಗೆ ವರದಿಯಾಗಿದೆ.
ಕಾರ್ಕಳದ ಲಕ್ಷ್ಮಿಗಣಪತಿ ಪೈ ಎಂಬವರು ತನ್ನ ಇಂಡಿಗೋ ಕಾರನ್ನು ನಿಲ್ಲಿಸಿ ಊಟಕ್ಕೆ ತೆರಳಿದ್ದು, ಈ ವೇಳೆ ಬೆಂಕಿಯಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿತು. ಇದರಿಂದ ಇಡೀ ಕಾರು ಹೊತ್ತು ಉರಿಯಿತು. ಕೂಡಲೇ ಸ್ಥಳೀಯರೆಲ್ಲ ಸೇರಿ ನೀರು ಹಾಕಿ ಬೆಂಕಿಯನ್ನು ನಂದಿಸಿದರು. ಇದರಿಂದ ಸುಮಾರು 75 ಸಾವಿರ ರೂ. ನಷ್ಟ ಉಂಟಾಗಿದೆ.
Next Story





