ಮೇವು ಸಂಗ್ರಹ ಸ್ಥಾಪನೆಗೆ ಜಿಲ್ಲಾಡಳಿತ ಸೂಚನೆ
ಸಾಗರ, ಡಿ.16: ತಾಲೂಕನ್ನು ಬರಪೀಡಿತ ಎಂದು ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಎಪಿಎಂಸಿ ಯಾರ್ಡ್‌ನಲ್ಲಿ ಮೇವು ಸಂಗ್ರಹವನ್ನು ಸ್ಥಾಪಿಸಲು ಜಿಲ್ಲಾಡಳಿತ ನಿರ್ದೇಶನ ನೀಡಿದೆ. ಈ ಹಿನ್ನೆಲೆಯಲ್ಲಿ ಹೆಚ್ಚು ಮೇವು ಲಭ್ಯವಿರುವ ರೈತರು ದಾನದ ರೂಪದಲ್ಲಿ ಅಥವಾ ಉತ್ತಮ ಗುಣಮಟ್ಟದ ಭತ್ತದ ಹುಲ್ಲನ್ನು ಟನ್‌ಗೆ 6,000 ರೂ.ನಂತೆ (ಸಾಗಣೆ ವೆಚ್ಚ ಸೇರಿ) ಖರೀದಿಸಲು ತಾಲೂಕು ಆಡಳಿತ ಉದ್ದೇಶಿಸಿದೆ.
ಆಸಕ್ತ ರೈತರ ಬಾಂಧವರು ಮೇವನ್ನು ದಾನ ಅಥವಾ ಖರೀದಿ ರೂಪದಲ್ಲಿ ಮೇವು ಸಂಗ್ರಹಗಳಿಗೆ ಸರಬರಾಜು ಮಾಡಲು ತಾಲೂಕು ಆಡಳಿತದ ಪರವಾಗಿ ಡಿ.ಎಂ. ಸತೀಶಕುಮಾರ್ ಕೋರಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ತಹಶೀಲ್ದಾರ್‌ರು (ಮೊ.9739310150), ಕಾರ್ಯ ನಿರ್ವಹಣಾಧಿಕಾರಿ (9480876115), ಪಶು ಸಂಗೋಪನೆ ಇಲಾಖೆ ಸಹಾಯಕ ನಿರ್ದೇಶಕರು (9449731532), ಸಹಾಯಕ ಕೃಷಿ ನಿರ್ದೇಶಕರು (8277932672), ಕೃಷಿ ಮಾರುಕಟ್ಟೆ ಕಾರ್ಯದರ್ಶಿ (9986602731) ಇವರನ್ನು ಸಂಪರ್ಕಿಸಲು ಕೋರಲಾಗಿದೆ.





