ಬಿ.ಎ. ಐಟಿಐಗೆ ತುಂಬೆ ಜಿಎಂಯು ಕುಲಪತಿ ಭೇಟಿ

ಮಂಗಳೂರು, ಡಿ.16: ಮುಹಿಯುದ್ದೀನ್ ಸಮೂಹ ವಿದ್ಯಾಸಂಸ್ಥೆಗಳ ಅಧೀನದ ಬಿ.ಎ. ಕೈಗಾರಿಕಾ ತರಬೇತಿ ಸಂಸ್ಥೆ(ಐಟಿಐ)ಗೆ ತುಂಬೆಗೆ ಗಲ್ಫ್ ವೈದ್ಯಕೀ ವಿಶ್ವವಿದ್ಯಾನಿಲಯ(ಜಿಎಂಯು)ದ ಕುಲಪತಿ ಮತ್ತು ಸಂಸ್ಥಾಪಕ ತುಂಬೆ ಮೊಯ್ದಿನ್ ಇತ್ತೀಚೆಗೆ ಭೇಟಿ ನೀಡಿದರು.
ಸಂಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಉತ್ತಮ ಹಾಗೂ ಮಾದರಿ ಕೈಗಾರಿಕಾ ತರಬೇತಿ ಸಂಸ್ಥೆಯಾಗಲು, ಇನ್ನಷ್ಟು ಅಭಿವೃದ್ಧಿ ಹೊಂದಲು ಸಹಕರಿಸುವುದಾಗಿ ನುಡಿದರು. ದುಬೈಯ್ಲರುವ ಪ್ರತಿಷ್ಠಿತ ಸಂಸ್ಥೆ ಕೆಇಎಫ್ ಹೋಲ್ಡಿಂಗ್ಸ್ ಮತ್ತು ಫೈಝಲ್ ಶಬನಾ ಫೌಂಢೇಶನ್ ಸಂಸ್ಥಾಪಕರಾದ ಫೈಝಲ್ ಕೊಟ್ಟಿಕೊಲ್ಲನ್ ಮತ್ತು ಶಬಾನಾ ಫೈಝಲ್ ದಂಪತಿ ಕೂಡಾ ಭೇಟಿ ನೀಡಿದ್ದರು.
ಬಿ.ಎ.ಗ್ರೂಪ್ ಇಂಡಿಯಾದ ಆಡಳಿತ ನಿರ್ದೇಶಕ ಬಿ.ಅಬ್ದುಸ್ಸಲಾಂ ಹಾಗೂ ಮುಹಿಯಿದ್ದೀನ್ ವುಡ್ ವರ್ಕ್ ಅಜ್ಮಾನ್ ದುಬೈನ ಆಡಳಿತ ನಿರ್ದೇಶಕ ಮಹಮ್ಮದ್ ಅಶ್ರಫ್ ಜೊತೆಗಿದ್ದರು. ಸಂಸ್ಥೆಯ ಪ್ರಾಚಾರ್ಯ ನವೀನ್ ಕುಮಾರ್ ಕೆ. ಎಸ್. ಅತಿಥಿಗಳನ್ನು ಸ್ವಾಗತಿಸಿ, ಸ್ಮರಣಿಕೆ ನೀಡಿ ಗೌರವಿಸಿದರು.
Next Story





