ಇಂದಿನಿಂದ ಮೀಲಾದ್ ಕಾರ್ಯಕ್ರಮ
ಮಂಗಳೂರು, ಡಿ.16: ಕಣ್ಣೂರು ಬೋರುಗುಡ್ಡೆಯ ಉಸ್ಮಾನುಬುನು ಅಫ್ಫಾನ್ ಮಸೀದಿ ಹಾಗೂ ಬದ್ರಿಯಾ ಹಯಾತುಲ್ ಇಸ್ಲಾಂ ಮದ್ರಸದ ವತಿಯಿಂದ ಮೀಲಾದ್ ಕಾರ್ಯಕ್ರಮ, 10ನೆ ಸ್ವಲಾತ್ ವಾರ್ಷಿಕ, ಮತ ಪ್ರವಚನ ಮತ್ತು ಬಡ ನಿರ್ಗತಿಕ ಮತ್ತು ವಿಧವೆಯರಿಗೆ ಹೊಲಿಗೆ ಯಂತ್ರ ಹಾಗೂ ದಿನಸಿ ಕಿಟ್ ವಿತರಣಾ ಸಮಾರಂಭವು ಡಿ.17, 18ರಂದು ನಡೆಯಲಿದೆ.
17ರಂದು ಸಂಜೆ 4ರಿಂದ ಮದ್ರಸ ವಿದ್ಯಾರ್ಥಿಗಳ ಮೀಲಾದ್ ಕಲಾ ಕಾರ್ಯಕ್ರಮ ಹಾಗೂ ಬಡ ನಿರ್ಗತಿಕ ಮತ್ತು ವಿಧವೆಯರಿಗೆ 3 ಹೊಲಿಗೆ ಯಂತ್ರ ಹಾಗೂ 5 ಕುಟುಂಬಗಳಿಗೆ ದಿನಸಿ ಸಾಮಗ್ರಿ ಕಿಟ್ ವಿತರಿಸಲಾಗುವುದು. 18ರಂದು ಪೂರ್ವಾಹ್ನ 11ಗಂಟೆಗೆ ಮೌಲಿದ್, ಮಗ್ರಿಬ್ ನಮಾಝ್‌ನ ಬಳಿಕ ಸ್ವಲಾತ್ ವಾರ್ಷಿಕ ಅಸ್ಸೈಯದ್ ಜುನೈದ್‌ಜಿಫ್ರಿ ತಂಙಳ್ ಆತೂರು ನೇತೃತ್ವದಲ್ಲಿ ನಡೆಯಲಿದೆ. ನಂತರ ಸಜಿಪ ಖತೀಬ್ ಅಶ್ಫಾಕ್ ಫೈಝಿಯವರಿಂದ ಧಾರ್ಮಿಕ ಪ್ರವಚನ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.
Next Story





