ಫಾ.ಮುಲ್ಲರ್: ಮೊಡವೆ ಚಿಕಿತ್ಸಾ ಸಪ್ತಾಹ
ಮಂಗಳೂರು, ಡಿ.16: ಫಾ.ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆಯ ಚರ್ಮ ವಿಭಾಗದ ವತಿಯಿಂದ ಡಿ.19ರಿಂದ ಡಿ.24ರವರೆಗೆ ಮೊಡವೆ ಚಿಕಿತ್ಸಾ ಸಪ್ತಾಹ ಹಮ್ಮಿಕೊಳ್ಳಲಾಗಿದೆ.
ಬೆಳಗ್ಗೆ 9ಗಂಟೆಯಿಂದ 1ರವರೆಗೆ, ಅಪರಾಹ್ನ 3ರಿಂದ 4ರವರೆಗೆ ಸಪ್ತಾಹದಲ್ಲಿ ಮೊಡವೆಗಳಿಗೆ ಚಿಕಿತ್ಸೆಯನ್ನು ಬಯಸುವವರಿಗೆ ಉಚಿತ ನೋಂದಣಿ, ಉಚಿತ ಔಷಧ, ರಕ್ತ ಪರೀಕ್ಷೆ ಮತ್ತು ವಿವಿಧ ಬಗೆಯ ಮೊಡವೆ ಚಿಕಿತ್ಸೆಗಳಿಗೆ ರಿಯಾಯಿತಿಯನ್ನು ನೀಡಲಾಗುವುದು ಎಂದು ಪ್ರಕಟನೆ ತಿಳಿಸಿದೆ.
Next Story





