ಹೊಳೆಗೆ ಬಿದ್ದು ವೃದ್ಧೆ ಮೃತ್ಯು
ಉಡುಪಿ, ಡಿ.16: ಉದ್ಯಾವರದ ಕುತ್ಪಾಡಿ ಹೊಳೆಯಲ್ಲಿ ಗುರುವಾರ ಸಂಜೆ ಮಹಿಳೆಯೊಬ್ಬರ ಮೃತದೇಹವು ಪತ್ತೆಯಾಗಿದೆ.
ಮೃತರನ್ನು ಕುತ್ಪಾಡಿಯ ಮುತ್ತು ಪೂಜಾರ್ತಿ(70) ಎಂದು ಗುರುತಿಸಲಾಗಿದೆ. ಬೆಳಗ್ಗೆ ಮನೆಯಿಂದ ತೋಟಕ್ಕೆ ಹೋದವರು ನಾಪತ್ತೆಯಾಗಿದ್ದರು. ಸಂಜೆ ಅವರ ಮೃತದೇಹ ಮನೆ ಸಮೀಪದ ಹೊಳೆಯಲ್ಲಿ ಪತ್ತೆಯಾಗಿದೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story