ಆರೋಪಿಗಳ ಜಾಮೀನು ಅರ್ಜಿ ವಿಚಾರಣೆ ಡಿ.22ಕ್ಕೆ ಮುಂದೂಡಿಕೆ
ಕೆಂಜೂರಿನ ಪ್ರವೀಣ್ ಪೂಜಾರಿ ಹತ್ಯೆ ಪ್ರಕರಣ
ಉಡುಪಿ, ಡಿ.16: ಕೆಂಜೂರಿನ ಪ್ರವೀಣ್ ಪೂಜಾರಿ ಹತ್ಯೆ ಪ್ರಕರಣದ ಆರು ಆರೋಪಿಗಳ ಜಾಮೀನು ಅರ್ಜಿ ವಿಚಾರಣೆಯನ್ನು ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಡಿ.22ಕ್ಕೆ ಮುಂದೂಡಿ ಆದೇಶ ನೀಡಿದೆ. ಈ ಪ್ರಕರಣದ 16ಆರೋಪಿಗಳಿಗೆ ಈಗಾಗಲೇ ಜಾಮೀನು ದೊರೆತಿದೆ.
ಪ್ರಕರಣದ ಆರೋಪಿಗಳಾದ ಸಂತೆಕಟ್ಟೆಯ ಶ್ರೀಕಾಂತ್ ಕುಲಾಲ್(19), ಸಂತೆಕಟ್ಟೆಯ ಪ್ರದೀಪ್(19), ರಾಜೇಶ್(21), ಕರ್ಜೆ ಕಡ್ಡಂಗೋಡಿನ ಉಮೇಶ್ ನಾಯ್ಕ(27), ಪ್ರದೀಪ ಆಚಾರಿ(20) ಸಹಿತ 6ಮಂದಿ ಜಾಮೀನು ಅರ್ಜಿ ಸಲ್ಲಿಸಿದ್ದಾರೆ.
ಈಗಾಗಲೇ ಹೆಬ್ರಿ ಬಚ್ಚಪ್ಪುವಿನ ಸುಕುಮಾರ್ ಕುಲಾಲ್(22), ಕೊಕ್ಕರ್ಣೆ ಬೆನಗಲ್‌ನ ಸುಕೇಶ ಆಚಾರಿ(32), ಪ್ರಕಾಶ್ ಆಚಾರ್(30), ಪೇತ್ರಿ ಚೆರ್ಕಾಡಿಯ ಶಾಂತರಾಮ ನಾಯ್ಕಿ(21), ಮಂಜುನಾಥ ನಾಯ್ಕಿ(20), ಕೊಕ್ಕರ್ಣೆ ಮೊಗವೀರಪೇಟೆಯ ಗಣೇಶ ಮೊಗವೀರ(25), ಬೆನಗಲ್ ಪಡುಬೆಟ್ಟುವಿನ ದಿನೇಶ ಮೊಗವೀರ(28), ಶಿವಪುರ ಕೆರೆಬೆಟ್ಟುವಿನ ಸುದೀಪ್‌ಶೆಟ್ಟಿ(19), ಹೆಬ್ರಿ ಇಂದಿರಾನಗರದ ಸುದೀಪ್ ಪೂಜಾರಿ(25), ಚಾರಾ ಕನ್ಯಾನದ ಮಂಜೇಶ್ ಕುಮಾರ್ ಶೆಟ್ಟಿ(22), ಹೆಬ್ರಿ ಸೀತಾನದಿಯ ಪ್ರತೀಕ್ ಶೆಟ್ಟಿ(19), ಕರ್ಜೆಯ ಪ್ರದೀಪ್ ನಾಯ್ಕಿ(20), ಹುಣ್ಸೆಮಕ್ಕಿಯ ಪ್ರಕಾಶ್ ನಾಯ್ಕಿ(36), ಕುಂಭಾಶಿಯ ಅರವಿಂದ ಕೋಟೇಶ್ವರ(37), ಕುಚ್ಚೂರು ಬಾದ್ಲ್‌ನ ರಾಘವೇಂದ್ರ ಶೆಟ್ಟಿ(22) ಎಂಬವರಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.





