ಆದಿವಾಸಿ ಜನರ ಹಕ್ಕುಗಳಿಗಾಗಿ ಡಿ.18ರಂದು ‘ದಿಡ್ಡಳ್ಳಿಗೆ ನಡೆಯೋಣ’ ಚಳವಳಿ

ಸಿದ್ದಾಪುರ, ಡಿ.17: ಮಾಲ್ದಾರೆ ಸಮೀಪದ ದಿಡ್ಡಳ್ಳಿಯಲ್ಲಿ ಆದಿವಾಸಿಗಳ ಗುಡಿಸಲುಗಳನ್ನು ಅರಣ್ಯ ಇಲಾಖೆ ಏಕಾಏಕಿ ತೆರವುಗೊಳಿಸಿದ್ದರಿಂದ ನೂರಾರು ಕುಟುಂಬಗಳು ಬೀದಿಪಾಲಾಗಿವೆ. ಇವರಿಗೆ ಸೂಕ್ತ ಪುನರ್ವಸತಿ ಕಲ್ಪಿಸಲು ಆಗ್ರಹಿಸಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯು ಡಿ.18ರಂದು ‘ದಿಡ್ಡಳ್ಳಿಗೆ ನಡೆಯೋಣ’ ಎಂಬ ಚಳವಳಿಯನ್ನು ಹಮ್ಮಿಕೊಂಡಿದೆ.
ಹೋರಾಟ ಸಮಿತಿಯ ನಿಯೋಗವು ಸ್ವಾತಂತ್ರ ಹೋರಾಟಗಾರ ದೊರೆಸ್ವಾಮಿ ನೇತೃತ್ವದಲ್ಲಿ ರವಿವಾರ 10 ಗಂಟೆ ಸುಮಾರಿಗೆ ದಿಡ್ಡಳ್ಳಿಗೆ ಭೇಟಿ ನೀಡಲಿದೆ. ನಿಯೋಗದಲ್ಲಿ ಎ.ಕೆ. ಸುಬ್ಬಯ್ಯ, ಸಮಿತಿಯ ಪದಾಧಿಕಾರಿಗಳಾದ ಗೌರಿ ಲಂಕೇಶ್, ಕೆ.ಎಲ್.ಅಶೋಕ್ ಮತ್ತಿತರರು ಇರುವರು ಎಂದು ಪ್ರಕಟನೆ ತಿಳಿಸಿದೆ.
Next Story





