ಎಂಪಿಎಲ್ ಕ್ರಿಕೆಟ್ : ವಿಶೇಷ ಕ್ರೀಡಾಪಟುಗಳೊಂದಿಗೆ ಟೀಮ್ ಎಲಿಗೆಂಟ್ ತಂಡ

ಮಂಗಳೂರು, ಡಿ.17: ನವಮಂಗಳೂರಿನಲ್ಲಿ ನಡೆಯಲಿರುವ ಮಂಗಳೂರು ಪ್ರೀಮಿಯಮ್ ಲೀಗ್‌ನಲ್ಲಿ ಭಾಗವಹಿಸುತ್ತಿರುವ ಮೂಡುಬಿದಿರೆಯ ಟೀಮ್ ಎಲಿಗೆಂಟ್ ತಂಡವು ಸ್ಪೆಷಲ್ ಒಲಿಂಪಿಕ್ಸ್‌ನ ವಿಶೇಷ ಆಟಗಾರರೊಂದಿಗೆ ಜೊತೆಗೂಡಿ ಡಿ.23ರಂದು ಸಂಜೆ 6ಕ್ಕೆ ಉಡುಪಿ ಮತ್ತು ಮಂಗಳೂರು ತಂಡಗಳ ಮಧ್ಯೆ ನಡೆಯುವ ಕ್ರಿಕೆಟ್ ಪಂದ್ಯದಲ್ಲಿ ಆಟವಾಡಲಿದ್ದಾರೆ.
ಟೀಮ್ ಎಲಿಗೆಂಟ್ ತಂಡವನ್ನು ವಿಶೇಷ ಆಟಗಾರರೊಂದಿಗೆ ಪರಿಚಯಿಸಿಕೊಳ್ಳುವ ಕಾರ್ಯಕ್ರಮವನ್ನು ಇತ್ತೀಚೆಗೆ ಸಾನಿಧ್ಯದಲ್ಲಿ ನಡೆಸಲಾಯಿತು. ಶಾಸಕ ಜೆ. ಆರ್. ಲೋಬೊ ಟೀಮ್ ಎಲಿಗೆಂಟ್ ತಂಡ ಹಾಗೂ ಸ್ಪೆಷಲ್ ಒಲಿಂಪಿಕ್ಸ್ ತಂಡಕ್ಕೆ ಶುಭ ಹಾರೈಸಿದರು. ಟೀಮ್ ಎಲಿಗೆಂಟ್ ತಂಡದ ಮಾಲಕ ಖಾದರ್ ಶರಿನ್‌ರನ್ನು ಈ ಸಂದರ್ಭ ಸನ್ಮಾನಿಸಲಾಯಿತು.
ತಂಡದ ಮ್ಯಾನೇಜರ್ ಸುರೇಶ್, ಮಾಜಿ ಮೇಯರ್‌ಮಹಾಬಲ ಮಾರ್ಲ, ಸೈಂಟ್ ಆಗ್ನೇಸ್ ಸ್ಪೆಷಲ್ ಸ್ಕೂಲಿನ ಪ್ರಾಂಶುಪಾಲೆ ಸಿ.ಮರಿಯಾ ಶ್ರುತಿ, ಮುಹಮ್ಮದ್ ಬಶೀರ್ ಮತ್ತಿತರರು ಉಪಸ್ಥಿತರಿದ್ದರು.
ಸಾನಿಧ್ಯದ ಆಡಳಿತಾಧಿಕಾರಿ ವಸಂತ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಸುಮಾ ಡಿಸಿಲ್ವಾ ಕಾರ್ಯಕ್ರಮ ನಿರೂಪಿಸಿದರು.





