ಸಾನಿಧ್ಯದಲ್ಲಿ ಕ್ರಿಸ್ಮಸ್ ಸಂಭ್ರಮ

ಮಂಗಳೂರು, ಡಿ.17: ನಗರದ ಶಕ್ತಿನಗರದಲ್ಲಿರುವ ಭಿನ್ನ ಸಾಮರ್ಥ್ಯದ ಮಕ್ಕಳ ವಸತಿಯುತ ಶಾಲೆಯಾದ ‘ಸಾನಿಧ್ಯ’ದಲ್ಲಿ ವೆಸ್ಟರ್ನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಆಡಳಿತ ನಿರ್ದೇಶಕ ಸ್ಟೀಫನ್ ಮೆಂಡಿಸ್ ಮತ್ತಿತರರು ಕ್ರಿಸ್ಮಸ್ ಹಬ್ಬ ಆಚರಿಸಿದರು.
ಐಸಿವೈಎಂನ ಆಡಳಿತ ನಿರ್ದೇಶಕ ಫಾ. ರೊನಾಲ್ಡ್ ಡಿಸೋಜ ಕಾರ್ಯಕ್ರಮ ಉದ್ಘಾಟಿಸಿದರು. ಸ್ಟೀಫನ್ ಮೆಂಡಿಸ್, ಪ್ರೊ. ಮೆಂಡಿಸ್, ಸಾನಿಧ್ಯದ ಆಡಳಿತಾಧಿಕಾರಿ ವಸಂತ್ ಕುಮಾರ್ ಶೆಟ್ಟಿ, ಗಣೇಶ ಸೇವಾ ಟ್ರಸ್ಟಿನ ಉಪಾಧ್ಯಕ್ಷೆ ದೇವದತ್ತರಾವ್ ಉಪಸ್ಥಿತರಿದ್ದರು.
ಸಾನಿಧ್ಯ ಹಾಗೂ ವೆಸ್ಟರ್ನ್ ಇನ್‌ಸ್ಟಿಟ್ಯೂಟ್‌ನ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಸೋಫಿಯ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.
Next Story





