ನದಿಯಲ್ಲಿ ಮುಳುಗಿ ಮೃತಪಟ್ಟ ಪ್ರಕರಣ: ನ್ಯಾಯ ಒದಗಿಸಲು ಶರೀಫ್ ಕುಟುಂಬ ಆಗ್ರಹ
ಮಂಗಳೂರು, ಡಿ.17: ಬಂಟ್ವಾಳ ತಾಲೂಕಿನ ಅರಳ ಗ್ರಾಮದ ಮುಳಾರಪಟ್ಣ ನದಿಯಲ್ಲಿ ಮುಳುಗಿ ಮೃತಪಟ್ಟ ಮುಹಮ್ಮದ್ ಶರ್ೀರ ಸಾವಿಗೆ ಪೊಲೀಸರ ನಿರ್ಲಕ್ಷ್ಯವೇ ಕಾರಣ. ಹಾಗಾಗಿ ಮೃತ ಶರ್ೀ ಕುಟುಂಬಕ್ಕೆ ಸೂಕ್ತ ನ್ಯಾಯ ಒದಗಿಸಬೇಕು ಎಂದು ಶರೀಫ್‌ರ ಸಹೋದರಳಿಯ ಜಫರುಲ್ಲಾ ಶನಿವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ.
ಕೂಲಿ ಕೆಲಸ ಮಾಡಿಕೊಂಡಿದ್ದ ಶರ್ೀ ಪೊಲೀಸ್ ದಾಳಿಯ ಸಂದರ್ಭ ಭಯಭೀತನಾಗಿ ನದಿಗೆ ಹಾರಿದ್ದರು. ಮರಳು ದಂಧೆಯಲ್ಲಿ ಶರೀಫ್ ಭಾಗಿಯಾಗಿಲ್ಲ. ಬಂಟ್ವಾಳ ಪೊಲೀಸರು ಅಸಹಜ ಸಾವು ಎಂದು ಪ್ರಕರಣವನ್ನು ಮುಚ್ಚಿ ಹಾಕುವ ಹುನ್ನಾರ ನಡೆಸುತ್ತಿದ್ದಾರೆ. ಮೇಲಾಧಿಕಾರಿಗಳಿ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಹಾಗಾಗಿ ಕುಟುಂಬಕ್ಕೆ ನ್ಯಾಯ ನೀಡಬೇಕು ಎಂದು ರಾಜ್ಯ ಸರಕಾರ ಮತ್ತು ಜಿಲ್ಲಾಡಳಿತಕ್ಕೆ ಅವರು ಮನವಿ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮೃತ ಶರ್ೀರ ತಾಯಿ ಆಸ್ಯಮ್ಮ, ಸಹೋದರ ಹುಸೈನಾರ್, ಇಬ್ರಾಹೀಂ ಉಪಸ್ಥಿತರಿದ್ದರು.
Next Story





