ಎರಡು ದಿನದಲ್ಲಿ ಇಬ್ಬರು ಸಚಿವರ ರಾಜೀನಾಮೆ: ಯಡಿಯೂರಪ್ಪ

ಬೆಂಗಳೂರು, ಡಿ.17: ಮುಂದಿನ ಎರಡು-ಮೂರು ದಿನದಲ್ಲಿ ಕಾಂಗ್ರೆಸ್‌ನ ಇಬ್ಬರು ಸಚಿವರ ಬಣ್ಣ ಬಯಲಾಗಲಿದ್ದು, ರಾಜೀನಾಮೆ ಕೊಡಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಶನಿವಾರ ಸವನ್ನ ಪ್ರಕಾಶನ ನಗರದ ಗಾಂಧಿ ಭವನದಲ್ಲಿ ಆಯೋಜಿಸಿದ್ದ ಕತೆಗಾರ ಜೋಗಿಯ ‘ಕತೆ ಚಿತ್ರಕತೆ ಸಂಭಾಷಣೆ’ ಕೃತಿಯ ಬಿಡುಗಡೆ ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸಚಿವರ ಬಣ್ಣ ಒಂದೊಂದಾಗಿ ಜನತೆಗೆ ತಿಳಿಯುತ್ತಿದೆ ಎಂದು ಲೇವಡಿ ಮಾಡಿದರು.
ಕಾಂಗ್ರೆಸ್ ಸಚಿವರ ದುಷ್ಕೃತ್ಯಗಳು ಒಂದೊಂದಾಗಿ ಬಯಲಾಗಿ ರಾಜೀನಾಮೆ ಕೊಡುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ರಾಜೀನಾಮೆ ಕೊಡುವ ಸಂದರ್ಭಗಳು ದೂರವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
Next Story





