ಅಖಿಲ ಭಾರತ ಸ್ಥಾನಿಕ ಬ್ರಾಹ್ಮಣ ಸಮಾವೇಶ
.jpg)
ಮಂಗಳೂರು, ಡಿ.17 : ವೈಯುಕ್ತಿಕ ಅಭಿವೃದ್ಧಿಯೊಂದಿಗೆ ಸಮುದಾಯದ ಅಭಿವೃದ್ಧಿಗೆ ಶ್ರಮಿಸಿದಾಗ ಸಮೃದ್ಧ ಸಮಾಜ ನಿರ್ಮಾಣ ಸಾಧ್ಯ ಎಂದು ಕರ್ನಾಟಕ ರಾಜ್ಯ ಕಾನೂನು ಮಹಾವಿದ್ಯಾಲಯದ ಮಾಜಿ ಕುಲಪತಿ ಡಾ.ಟಿ.ಆರ್.ಸುಬ್ರಹ್ಮಣ್ಯ ಅಭಿಪ್ರಾಯಪಟ್ಟರು.
ನಗರದ ಶ್ರೀಸುಬ್ರಹ್ಮಣ ಸಭಾಸದನದಲ್ಲಿ ಶನಿವಾರ ನಡೆದ ಅಖಿಲ ಭಾರತ ಸ್ಥಾನಿಕ ಬ್ರಾಹ್ಮಣ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಂವಿಧಾನವು ಪ್ರತಿಯೊಬ್ಬರ ಅಭಿವೃದ್ದಿಗೆ ಅವಕಾಶಗಳನ್ನು ನೀಡಿದೆ. ಇದರ ಲಾಭವನ್ನು ಸ್ಥಾನಿಕ ಬ್ರಾಹ್ಮಣ ಸಮುದಾಯ ಪಡೆದುಕೊಳ್ಳಬೇಕು. ಉನ್ನತ ಸ್ಥಾನಗಳಲ್ಲಿರುವ ಸಮುದಾಯದ ವ್ಯಕ್ತಿಗಳು ಯುವಜನತೆಗೆ ಪ್ರೇರಣೆ, ಮಾಹಿತಿ ನೀಡುವ ಕೆಲಸ ಮಾಡಬೇಕು ಎಂದ ಅವರು ಸಲಹೆ ಮಾಡಿದರು.
ಸಮಿತಿಯ ಅಧ್ಯಕ್ಷ ಎಂ.ಆರ್.ವಾಸುದೇವ ಅಧ್ಯಕ್ಷತೆ ವಹಿಸಿದ್ದರು. ಗೌರವ ಸಂಚಾಲಕಿ ಕವಿತಾ ಶಾಸ್ತ್ರಿ, ಕೋಶಾಧಿಕಾರಿ ಉದಯ ಕುಮಾರ್ ರಾವ್ ಪಿ. ಉಪಸ್ಥಿತರಿದ್ದರು.
Next Story





