5 ಸಚಿವರ ಕೋಪಕ್ಕೆ ತುತ್ತಾದ ಅಧಿಕಾರಿಗಳು
ಹಾಸನ ಜಿಪಂನಲ್ಲಿ ಜಿಲ್ಲೆಯ ಬರ ನಿರ್ವಹಣೆ ಕುರಿತು ಸಭೆ
.jpg)
ಹಾಸನ , ಡಿ.17 : ಬರ ನಿರ್ವಹಣೆಯಲ್ಲಿ ಸಚಿವರ ಪ್ರಶ್ನೆಗೆ ಬೇಜವಬ್ದಾರಿ ಹೇಳಿಕೆ ನೀಡಿದ ಅಧಿಕಾರಿಗಳನ್ನು ಐವರು ಸಚಿವರು ತರಾಟೆಗೆ ತೆಗೆದುಕೊಂಡ ಪ್ರಸಂಗ ಹಾಸನದಲ್ಲಿ ನಡೆಯಿತು.
ನಗರದ ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ಜಿಲ್ಲೆಯ ಬರ ಪರಿಸ್ಥಿತಿಯ ಬಗ್ಗೆ ಪರಾಮರ್ಶಿಸಲು ರಚಿಸಿರುವ ಸಚಿವ ಸಂಪುಟದ ಉಪ ಸಮಿತಿಯ ಪಶೀಲನಾ ಸಭೆಯಲ್ಲಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಕೆ.ಆರ್.ರಮೇಶ್ ಕುಮಾರ್ ಅವರು ನೀರು ಪೂರೈಕೆ ಆಗಿರುವ ಬಿಲ್ ಪಾವತಿ ಬಗ್ಗೆ ಹಾಸನದ ತಹಸೀಲ್ದಾರ್ ಶಿವಶಂಕರಪ್ಪ ಅವರಿಗೆ ಮಾಹಿತಿ ಕೇಳಿದಾಗ ಬೇಜವಬ್ದಾರಿ ಹೇಳಿಕೆ ನೀಡಿದ ವೇಳೆ ಸಚಿವರ ಕೋಪಕ್ಕೆ ಗುರಿಯಾಗದರು.
ಅಧಿಕಾರಿಗಳು ಕಮಿಷನ್ ಆಸೆಗೆ ಬೀಳಬಾರದು. ಮಧ್ಯವರ್ತಿಗಳಂತೆ ವರ್ತಿಸಬಾರದು. ಬರ ಪರಿಹಾರ ಕಾಮಗಾರಿಗಳನ್ನು ಸರ್ಕಾರದ ವಿಶೇಷ ಮುತುವರ್ಜಿಯಿಂದ ರೂಪಿಸಿದ್ದು ಅವುಗಳ ಅನುಷ್ಠಾನದಲ್ಲಿ ವಿಳಂಬವಾಗಬಾರದು. ಹಾಗೇ ನಿರ್ಲಕ್ಷ್ಯ ತೋರುವವರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ವಹಿಸಿ ಕೆಲಸವನ್ನು ಸೇವೆಯಿಂದ ಅಮಾನತುಗೊಳಿಸಿ ಎಂದು ಜಿಲ್ಲಾಧಿಕಾರಿಯವರಿಗೆ ತಿಳಿಸಿದರು.
ನಂತರ ಇತರೆ ಸಚಿವರು ಕೂಡ ಇಂಜಿನಿಯರ್ ಬಳಿ ಬರ ಹಣದ ಬಗ್ಗೆ ಅಂಕಿ-ಅಂಶ ಕೇಳಿದಾಗ ತಡವರಿಸಿ ಮೌನ ತಾಳಿದರು. ಯಾವ ಅಧಿಕಾರಿ ತಮ್ಮ ಕರ್ತವ್ಯದಲ್ಲಿ ಲೋಪ ಮಾಡಿದರೇ ಅಂತವರನ್ನು ತಕ್ಷಣ ಸಸ್ಪೆಂಡ್ ಮಾಡಿ ಎಂದು ಖಡಕ್ ಎಚ್ಚರಿಕೆ ನೀಡಿದರು.
ಈ ವೇಳೆ ಜಿಲ್ಲಾಧಿಕಾರಿ ವಿ. ಚೈತ್ರಾ ಅವರು ರಾಜ್ಯದಿಂದ ಜಿಲ್ಲೆಗೆ ಬಂದಿರುವ ಬರ ಪರಿಹಾರದ ಹಣ ಹಾಗೂ ಉಳಿದಿರುವ ಬಾಕಿ ಹಣ ಎಲ್ಲಾವುದರ ಬಗ್ಗೆ ವಿವರ ನೀಡಿದರು. ಸಹಕಾರ ಸಚಿವರಾದ ಮಹದೇವಪ್ರಸಾದ್, ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಯು.ಟಿ.ಖಾದರ್ ಕೂಡ ಅಧಿಕಾರಿಗಳ ಕಾರ್ಯವೈಕರಿ ವಿರುದ್ಧ ಕಿಡಿಕಾರಿದರು.
ಕಾಗೋಡು ತಿಮ್ಮಪ್ಪರಿಂದ ಸಭೆಯ ಅಧ್ಯಕ್ಷತೆ
ಜಿಲ್ಲಾ ಪಂಚಾಯಿತಿ ಅಧ್ಯಕ್ಷತೆ ವಹಿಸಿ ರಾಜ್ಯ ಕಂದಾಯ ಸಚಿವರಾದ ಕಾಗೋಡು ತಿಮ್ಮಪ್ಪ ಮಾತನಾಡಿ, ಜಿಲ್ಲೆಯ 7 ತಾಲೂಕುಗಳನ್ನು ಬರಪೀಡಿತ ಪ್ರದೇಶ ಎಂದು ಸರಕಾರ ಘೋಷಣೆ ಮಾಡಿದೆ. ಮೊದಲ ಹಂತದ ಹಣವನ್ನು ಈಗಾಗಲೇ ಜಿಲ್ಲೆಯ ಎಲ್ಲಾ ತಾಲೂಕಿಗೂ ಬಿಡುಗಡೆ ಮಾಡಲಾಗಿದೆ. ಅವಶ್ಯಕವಾಗಿರುವ ಕುಡಿಯುವ ನೀರು ಪೂರೈಕೆ, ಜಾನುವಾರುಗಳಿಗೆ ಮೇವು ನೀಡಲು ಸೂಚಿಸಿದರು.
ಇಲ್ಲಿನ ಶಾಸಕರು ಸಮಸ್ಯೆಗೆ ಸ್ಪಂದಿಸಿ ಅಧಿಕಾರಿಗಳಿಂದ ಕೆಲಸ ಮಾಡಿಸಬೇಕು. ಯಾರಾದರೂ ನಿರ್ಲಕ್ಷ ತೋರಿಸಿದರೇ ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲು ಮುಂದಾಗಬೇಕು ಎಂದು ಕಿವಿಮಾತು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಎ. ಮಂಜು ಮಾತನಾಡಿ, ಜಿಲ್ಲೆಯ 7 ತಾಲೂಕುಗಳಲ್ಲೂ ತೀವ್ರ ಬರ ಎದುರಿಸುತ್ತಿದೆ. ಹೆಚ್ಚಿನ ಅನುದಾನದ ಅವಶ್ಯಕತೆ ಇದೆ ಎಂದರು.
ಈಗಾಗಲೇ ಕ್ಷೇತ್ರವಾರು ಹಣವನ್ನು ಬಿಡುಗಡೆ ಮಾಡಿದ್ದು, ಇನ್ನು ಹೆಚ್ಚಿನ ಹಣದ ಅವಶ್ಯಕತೆ ಇದೆ ಎಂದು ಸಚಿವ ಕಾಗೋಡು ತಿಮ್ಮಪ್ಪಗೆ ಒತ್ತಾಯಿಸಿದರು. ಕೊಳವೆ ಬಾವಿ ಕಒರೆದರೇ ನೀರು ಬರುತ್ತಿಲ್ಲ. ತುತಾಧಗಿ ಪೈಪ್ ಲೈನ್ ಅಳವಡಿಸಿ, ಕೊರೆಯಲಾಗಿರುವ ಕೊಳವೆಗೆ ಇನ್ನಷ್ಟು ಆಳ ಕೊರೆಯಿಸಬೇಕಾಗಿದೆ. ಶಾಶ್ವತ ಕುಡಿಯುವ ನೀರು ಸರಬರಾಜು ಬೇಕಾಗಿದೆ ಎಂದರು.
ಸಭೆಯಲ್ಲಿ ಭಾಗವಹಿಸಿದ್ದ ಶಾಸಕರಾದ ಹೆಚ್.ಎಸ್. ಪ್ರಕಾಶ್, ಕೆ.ಎಮ್. ಶಿವಲಿಂಗೇಗೌಡ, ಸಿ.ಎನ್.ಆ ಬಾಲಕೃಷ್ಣ, ಹೆಚ್.ಕೆ. ಕುಮಾರಸ್ವಾಮಿ ಇತರರು ಬರ ಪರಿಹಾರದ ವಿಚಾರವಾಗಿ ನೀಡಲಾಗಿರುವ ಅನುದಾನವು ಕಡಿಮೆಯಾಗಿರುವ ಬಗ್ಗೆ ಸಚಿವರ ಮುಂದೆ ಗಮನಸೆಳೆದರು.
ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಎಂ.ಎ.ಗೋಪಾಲಸ್ವಾಮಿ, ಕಾರ್ಯದರ್ಶಿ ಜಯಂತಿ, ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಶ್ವೇತಾ ದೇವರಾಜ್ ಉಪಸ್ಥಿತರಿದ್ದರು.







