ರಂಜಿತಾಗೆ ಎರಡು ಚಿನ್ನದ ಪದಕ

ಮೂಡಿಗೆರೆ, ಡಿ.17: ಎಂಕಾಂ ಪದವಿಯಲ್ಲಿ ಮೈಸೂರು ವಿಶ್ವ ವಿದ್ಯಾನಿಲಯದಿಂದ ಅತೀ ಹೆಚ್ಚು ಅಂಕ ಗಳಿಸಿದ ಎನ್.ಎನ್.ರಂಜಿತಾಗೆ 2 ಚಿನ್ನದ ಪದಕಗಳು ದೊರಕಿದೆ.
ಮೈಸೂರಿನಲ್ಲಿ ನಡೆದ ವಿಶ್ವವಿದ್ಯಾನಿಲಯದ ವಾರ್ಷಿಕ ಘಟಿಕೋತ್ಸವದಲ್ಲಿ ಕುಲಪತಿ ರಂಗಪ್ಪ,ಕುಲಸಚಿವ ಆರ್.ರಾಜಣ್ಣ, ಮೈಸೂರಿನ ರಾಜ ಮಾತೆ ಪ್ರಮೋದಾದೇವಿ ಉಪಸ್ಥಿತಿಯಲ್ಲಿ ಪಕವನ್ನು ರಾಜ್ಯಪಾಲ ವಜುಭಾಯಿವಾಲ ಪ್ರದಾನ ಮಾಡಿದ್ದಾರೆ. ರಂಜಿತಾ ನಿಡಗೂಡು ಗ್ರಾಮದ ವಿನೋದ ಮತ್ತು ಎನ್.ಕೆ. ರಮೇಶ್ ದಂಪತಿಯ ಪುತ್ರಿಯಾಗಿದ್ದು, ತಾಲೂಕಿಗೆ ಕೀರ್ತಿ ತಂದಿದ್ದಾರೆ.
Next Story





