ಇಂದು ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟ
ಮೂಡಿಗೆರೆ, ಡಿ.17: ಬಣಕಲ್‌ಸಮೀಪದ ಸಬ್ಲಿ ಗ್ರಾಮದ ಜೈಭೀಮ್ ಯುವಕ ಸಂಘದ ವತಿಯಿಂದ ಡಾ.ಬಿ.ಆರ್. ಅಂಬೇಡ್ಕರ್‌ರವರ 60ನೆ ಪರಿನಿರ್ವಾಣ ದಿನದ ಪ್ರಯುಕ್ತ ಸಬ್ಲಿ ಶಾಲಾ ಆಟದ ಮೈದಾನದಲ್ಲಿ ಡಿ.18ರಂದು ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟ ನಡೆಯಲಿದೆ.
ಆಸಕ್ತ ಕ್ರೀಡಾ ತಂಡಗಳು ಪಂದ್ಯಾಟದಲ್ಲಿ ಭಾಗವಹಿ ಸಬಹುದಾಗಿದ್ದು, ಕ್ರೀಡಾಳುಗಳು ಆಧಾರ್ ಅಥವಾ ಚುನಾವಣಾ ಗುರುತಿನ ಚೀಟಿಯನ್ನು ತರಬೇಕು. ಭಾಗವಹಿಸುವ ಕ್ರೀಡಾ ತಂಡಗಳು 800 ರೂ. ಪ್ರವೇಶ ಶುಲ್ಕ ನೀಡಿ ಹೆಸರು ನೋಂದಾಯಿಸಬಹುದಾಗಿದೆ ಎಂದು ಜೈಭೀಮ್ ಯುವಕ ಸಂಘದ ಅದ್ಯಕ್ಷ ಸಬ್ಲಿ ದೇವರಾಜ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೊ. 9481272493/ 9483773241ನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.
Next Story





