ಡಿ.18ರಂದು ಕಿಶೋರ ಯಕ್ಷಸಂಭ್ರಮ ಸಮಾರೋಪ
ಯಕ್ಷ ಗುರು ರಾಜೀವ್ ತೋನ್ಸೆಗೆ ಸನ್ಮಾನ

ಉಡುಪಿ, ಡಿ.17: ಯಕ್ಷಶಿಕ್ಷಣ ಟ್ರಸ್ಟ್ ಆಯೋಜಿಸಿರುವ ಕಿಶೋರ ಯಕ್ಷ ಸಂಭ್ರಮದ ಉಡುಪಿ ಪ್ರದರ್ಶನಗಳ ಸಮಾರೋಪ ಸಮಾರಂಭ ಡಿ.18 ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ನಡೆಯಲಿದೆ. ಪರ್ಯಾಯ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಹಾಗೂ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರು ಅನುಗ್ರಹ ಸಂದೇಶ ನೀಡಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಕಲಾವಿದರೂ, ಯಕ್ಷಗಾನ ಗುರುಗಳೂ ಆದ ರಾಜೀವ ತೋನ್ಸೆ ಅವರಿಗೆ ಯಕ್ಷಶಿಕ್ಷಣ ಟ್ರಸ್ಟ್ವತಿಯಿಂದ ಸಮ್ಮಾನಿಸಲಾಗುವುದು.
ಪರ್ಯಾಯ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಹಾಗೂ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರು ಅನುಗ್ರಹ ಸಂದೇಶ ನೀಡಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮ್ವರಾಜ್‌ಅ್ಯಕ್ಷತೆ ವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಕಲಾವಿದರೂ, ಯಕ್ಷಗಾನ ಗುರುಗಳೂ ಆದ ರಾಜೀವ ತೋನ್ಸೆ ಅವರಿಗೆ ಯಕ್ಷಶಿಕ್ಷಣ ಟ್ರಸ್ಟ್ ವತಿಯಿಂದ ಸಮ್ಮಾನಿಸಲಾಗುವುದು. ಕಿಶೋರ ಯಕ್ಷ ಸಂಭ್ರಮದಲ್ಲಿ ಉಡುಪಿಯಲ್ಲಿ ಒಟ್ಟು 27 ಪ್ರದರ್ಶನಗಳು ನಡೆದಿವೆ. ಇನ್ನು ಬ್ರಹ್ಮಾವರ ಪರಿಸರದ 14 ಶಾಲೆಗಳ 15 ಪ್ರದರ್ಶನಗಳು ಬ್ರಹ್ಮಾವರ ಬಸ್‌ನಿಲ್ದಾಣದ ಬಳಿಯ ಹಂದಾಡಿ ಸುಬ್ಬಣ್ಣ ಭಟ್ಟ ವೇದಿಕೆಯಲ್ಲಿ ಡಿ.21ರಿಂದ 28ರವರೆಗೆ ನಡೆಯಲಿದೆ ಎಂದು ಕಾರ್ಯದರ್ಶಿ ಮುರಲಿ ಕಡೆಕಾರ್ ತಿಳಿಸಿದ್ದಾರೆ.







