ಐದನೆ ಟೆಸ್ಟ್: ಆಂಗ್ಲರು 477ಕ್ಕೆ ಆಲೌಟ್

ಚೆನ್ನೈ, ಡಿ.17: ಇಲ್ಲಿ ನಡೆಯುತ್ತಿರುವ ಐದನೆ ಹಾಗೂ ಅಂತಿಮ ಕ್ರಿಕೆಟ್ ಟೆಸ್ಟ್‌ನಲ್ಲಿ ಭಾರತ ವಿರುದ್ಧ ಇಂಗ್ಲೆಂಡ್ ಮೊದಲ ಇನಿಂಗ್ಸ್‌ನಲ್ಲಿ 477 ರನ್‌ಗಳಿಗೆ ಆಲೌಟಾಗಿದ್ದು, ಭಾರತ ತಿರುಗೇಟು ನೀಡಿದೆ.
ಚಿಪಾಕ್‌ನ ಎಂ.ಎ. ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐದನೆ ಹಾಗೂ ಅಂತಿಮ ಕ್ರಿಕೆಟ್ ಟೆಸ್ಟ್‌ನ ಎರಡನೆ ದಿನದ ಆಟ ಕೊನೆಗೊಂಡಾಗ ಭಾರತ 20 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 60 ರನ್ ಗಳಿಸಿತ್ತು.
30 ರನ್ ಗಳಿಸಿರುವ ಆರಂಭಿಕ ದಾಂಡಿಗ ಕೆ.ಎಲ್.ರಾಹುಲ್ ಮತ್ತು 28 ರನ್ ಗಳಿಸಿರುವ ಪಾರ್ಥಿವ್ ಪಟೇಲ್ ಔಟಾಗದೆ ಕ್ರೀಸ್‌ನಲ್ಲಿದ್ದಾರೆ.
ಇಂಗ್ಲೆಂಡ್ ತಂಡದ ಗರಿಷ್ಠ ಮೊತ್ತ: ಮೊದಲ ದಿನದ ಆಟ ನಿಂತಾಗ 90 ಓವರ್‌ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 284 ರನ್ ಗಳಿಸಿದ್ದ ಇಂಗ್ಲೆಂಡ್ ತಂಡ ಈ ಮೊತ್ತಕ್ಕೆ 193 ರನ್ ಸೇರಿಸುವಷ್ಟರಲ್ಲಿ ಆಲೌಟಾಗಿದೆ.
ಇಂದಿನ ಆಟ ಆರಂಭದಲ್ಲಿ ಇಂಗ್ಲೆಂಡ್ ತಂಡದ ಬ್ಯಾಟಿಂಗ್ ಕಳಪೆಯಾಗಿತ್ತು. ಬಳಿಕ ಚೇತರಿಸಿಕೊಂಡಿತು.ಎಂಟನೆ ವಿಕೆಟ್‌ಗೆ ಆದಿಲ್ ರಶೀದ್ ಮತ್ತು ಡಾಸನ್ ಶತಕದ ಜೊತೆಯಾಟ ನೀಡಿ ತಂಡವನ್ನು ಆಧರಿಸಿದರು.
ಮೊದಲ ದಿನದ ಆಟ ನಿಂತಾಗ ಔಟಾಗದೆ 120 ರನ್ ಗಳಿಸಿದ್ದ ಅಲಿ ಮತ್ತು ಬೆನ್ ಸ್ಟೋಕ್ಸ್ ಆಟ ಮುಂದುವರಿಸಿ ತಂಡದ ಖಾತೆಗೆ ಕೇವಲ 3 ರನ್ ಸೇರುವಷ್ಟರಲ್ಲಿ ಇಂಗ್ಲೆಂಡ್‌ನ 5ನೆ ವಿಕೆಟ್ ಉರುಳಿತು. ಸ್ಟೋಕ್ಸ್ ನಿನ್ನೆಯ ಸ್ಕೋರ್‌ಗೆ 1 ರನ್ ಸೇರಿಸಿ ಔಟಾದರು.
ತಂಡದ ಸ್ಕೋರ್ 300 ತಲುಪುವಾಗ ಇನ್ನೊಂದು ವಿಕೆಟ್ ಉರುಳಿತು. ಬಟ್ಲರ್ (5) ಅವರನ್ನು ಇಶಾಂತ್ ಶರ್ಮ ಎಲ್‌ಬಿಡಬ್ಲು ಬಲೆಗೆ ಬೀಳಿಸಿದರು. ಮೊಯಿನ್ ಅಲಿ ದ್ವಿಶತಕದ ಯೋಜನೆಯಲ್ಲಿದ್ದರು ಆದರೆ ಅವರ ಬ್ಯಾಟಿಂಗ್‌ನ್ನು 146ರಲ್ಲಿ ಉಮೇಶ್ ಯಾದವ್ ಕೊನೆಗೊಳಿಸಿದರು.
262 ಎಸೆತಗಳನ್ನು ಎದುರಿಸಿದ ಅಲಿ 13 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 146 ರನ್ ಗಳಿಸಿದರು. ಈ ಹಿಂದೆ ಅವರು ಜೀವನಶ್ರೇಷ್ಠ 155 ರನ್ ಗಳಿಸಿದ್ದರು. ಈ ದಾಖಲೆಯನ್ನು ಉತ್ತಮಪಡಿಸುವಲ್ಲಿ ವಿಫಲರಾದರು.
ಇಂಗ್ಲೆಂಡ್ 103.4 ಓವರ್‌ಗಳಲ್ಲಿ 321 ರನ್ ಗಳಿಸುವಷ್ಟರಲ್ಲಿ 7 ವಿಕೆಟ್ ಕಳೆದುಕೊಂಡಿತು. ಆ ಮೂಲಕ ಭಾರತ ಕೇವಲ 37 ರನ್‌ಗಳಿಗೆ ಮೂರು ವಿಕೆಟ್‌ಗಳನ್ನು ಉಡಾಯಿಸಿತು.
ಎಂಟನೆ ವಿಕೆಟ್‌ಗೆ ಆದಿಲ್ ರಶೀದ್ ಮತ್ತು ಚೊಚ್ಚಲ ಟೆಸ್ಟ್ ಆಡುತ್ತಿರುವ ಡಾವ್ಸನ್ ಜೊತೆಯಾಗಿ ತಂಡವನ್ನು ಆಧರಿಸಿದರು. ಭಾರತಕ್ಕೆ ಇನ್ನೊಂದು ವಿಕೆಟ್ ಉಡಾಯಿಸಲು ಬಹಳ ಹೊತ್ತು ಕಾಯಬೇಕಾಯಿತು.
ರಶೀದ್ ಮತ್ತು ಲಿಯಾಮ್ ಡಾಸನ್ ಎಂಟನೆ ವಿಕೆಟ್‌ಗೆ ಜೊತೆಯಾಟದಲ್ಲಿ 108 ರನ್‌ಗಳನ್ನು ಸೇರಿಸುವ ಮೂಲಕ ಇಂಗ್ಲೆಂಡ್‌ನ ಸ್ಕೋರ್‌ನ್ನು 400ರ ಗಡಿ ದಾಟಿಸಿದರು. 155 ಎಸೆತಗಳನ್ನು ಎದುರಿಸಿದ ರಶೀದ್ ಅವರು 8 ಬೌಂಡರಿಗಳ ಸಹಾಯದಿಂದ 60 ರನ್ ಗಳಿಸಿ ಔಟಾದರು.
ರಶೀದ್ ಔಟಾದ ಬಳಿಕ ಸ್ಟುವರ್ಟ್ ಬ್ರಾಡ್ ಕ್ರೀಸ್‌ಗೆ ಆಗಮಿಸಿದರು. ಡಾಸನ್ ಮತ್ತು ಬ್ರಾಡ್ ಜೊತೆಯಾಟದಲ್ಲಿ 26 ರನ್ ಜಮೆ ಮಾಡಿದರು. ಬ್ರಾಡ್ 19 ರನ್ ಗಳಿಸಿ ರನೌಟಾದರು.ಜಾಕ್ ಬಾಲ್ 12 ರನ್ ಗಳಿಸಿ ಔಟಾಗುವುದರೊಂದಿಗೆ ಭಾರತ ಆಲೌಟಾಯಿತು.
ಡಾವ್ಸನ್ 66 ರನ್(148ಎ, 5ಬೌ,1ಸಿ) ಗಳಿಸಿ ಔಟಾಗದೆ ಉಳಿದರು.
ಭಾರತದ ಪರ ರವೀಂದ್ರ ಜಡೇಜ 106ಕ್ಕೆ 3 ವಿಕೆಟ್, ಉಮೇಶ್ ಯಾದವ್ 73ಕ್ಕೆ 2, ಇಶಾಂತ್ ಶರ್ಮ 42ಕ್ಕೆ 2, ಆರ್.ಅಶ್ವಿನ್ ಮತ್ತು ಅಮಿತ್ ಮಿಶ್ರಾ ತಲಾ 1 ವಿಕೆಟ್ ಹಂಚಿಕೊಂಡರು.
,,,,,,,,,,,





