ಪೊಲೀಸರ ಚಿತ್ರಹಿಂಸೆಯಿಂದ ವ್ಯಕ್ತಿ ಸಾವು; ಇಬ್ಬರು ಪೊಲೀಸರ ಅಮಾನತು
ಜಮ್ಮು, ಡಿ.17: ನಗರದ ಹೊರವಲಯದಲ್ಲಿ ಅಕ್ರಮ ಮದ್ಯ ಸಾಗಾಣಿಕೆ ಆರೋಪದಲ್ಲಿ ಬಂಧಿಸಲ್ಪಟ್ಟಿದ್ದ ವ್ಯಕ್ತಿಯೋರ್ವ ಪೊಲೀಸರ ಚಿತ್ರಹಿಂಸೆಯಿಂದ ಸಾವನ್ನಪ್ಪಿದ್ದಾನೆ. ಇದು ಪ್ರದೇಶದಲ್ಲಿ ಭಾರೀ ಪ್ರತಿಭಟನೆಗಳಿಗೆ ಕಾರಣವಾಗಿದೆ.
ಚಿತ್ರಹಿಂಸೆ ಆರೋಪ ಮತ್ತು ಬಂಧಿತನ ಸಾವಿಗೆ ಸಂಬಂಧಿಸಿದಂತೆ ಇಬ್ಬರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ.
ರಿಂಕು ಕುಮಾರನನ್ನು ಡಿ.13ರಂದು ಬಂಧಿಸಿದ್ದ ಪೊಲೀಸರು ಆತನ ಬಳಿಯಿಂದ 67 ಅಕ್ರಮ ಮದ್ಯದ ಸ್ಯಾಚೆಟ್‌ಗಳನ್ನು ವಶಪಡಿಸಿಕೊಂಡಿದ್ದರು. ಗುರುವಾರ ರಾತ್ರಿ ಆತ ಎದೆನೋವಿನ ಬಗ್ಗೆ ದೂರಿಕೊಂಡಿದ್ದ. ಆತನನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸ ಲಾಗಿತ್ತು. ಶುಕ್ರವಾರ ಬೆಳಗ್ಗೆ ಆತ ಕೊನೆಯುಸಿರೆಳೆದಿದ್ದಾನೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದರು.
ಘಟನೆಯ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ಎಎಸುನಿಲ್ ಗುಪ್ತಾ ತಿಳಿಸಿದರು.
Next Story





