ಕೋಟಿ ಚೆನ್ನಯರ ಜನ್ಮಸ್ಥಳ ‘ಪರ್ಮಲೆ’ಯ ಸಮಗ್ರ ಅಭಿವೃದ್ಧಿ ಕಾರ್ಯಾರಂಭ

ಪುತ್ತೂರು, ಡಿ.17: ಕೋಟಿ-ಚೆನ್ನಯರು ಜನಿಸಿದ ಪಡುಮಲೆ ಜನ್ಮಸ್ಥಾನದ ಅಭಿವೃದ್ಧಿಯನ್ನು ಕೋಟಿ ಚೆನ್ನಯರು ಜನಿಸಿದ ಪರ್ಮಲೆ (ಪೆರುಮಳ) ಬಲ್ಲಾಳರ ಅರಮನೆ ಪ್ರದೇಶದಲ್ಲಿರುವ ಅವರು ಆರಾಧಿಸಿಕೊಂಡು ಬರುತ್ತಿದ್ದ ನಾಗಬ್ರಹ್ಮ ದೇವರ ಸಾನಿಧ್ಯದ ಜೀರ್ಣೋದ್ಧಾರದೊಂದಿಗೆ ಆರಂಭಿಸುವ ಹಿನ್ನೆಲೆಯಲ್ಲಿ ನಾಗಬ್ರಹ್ಮ ದೇವರಿಗೆ ವಿಶೇಷ ಪೂಜೆ, ಬುದ್ಧಾಂತನ ಆತ್ಮಕ್ಕೆ ಮೋಕ್ಷ ನೀಡುವ ಧಾರ್ಮಿಕ ಕಾರ್ಯಕ್ರಮಗಳು ಶನಿವಾರ ಆರಂಭಗೊಂಡಿತು. ಕೋಟಿ ಚೆನ್ನಯ ಜನ್ಮಸ್ಥಳ ಸಂಚಲನಾ ಸಮಿತಿಯ ನೇತೃತ್ವದಲ್ಲಿ ಗ್ರಾಮಸ್ಥರ ಸಹಕಾರದೊಂದಿಗೆ ಕೋಟಿ ಚೆನ್ನಯರ ಜನ್ಮಸ್ಥಳ ಅಭಿವೃದ್ಧಿಗೆ ಶನಿವಾರ ನಾಗಬ್ರಹ್ಮ ದೇವರ ಸಾನಿಧ್ಯದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಲಾಯಿತು. ಕುಂಟಾರು ವಾಸುದೇವ ತಂತ್ರಿ ಅವರ ಮಾರ್ಗದರ್ಶನದಲ್ಲಿ ಕುಂಟಾರು ರವೀಶ ತಂತ್ರಿ, ವೇದಮೂರ್ತಿ ಅನಂತರಾಜ ಭಟ್ ಮುಜೂರು, ಶ್ರೀಧರ ತಂತ್ರಿ ಅವರ ನೇತೃತ್ವದಲ್ಲಿ ಶನಿವಾರ ಬೆಳಗ್ಗೆ ಗಣಹೋಮ, ಅಘಮರ್ಶಣ ಹೋಮ, ನವಗ್ರಹ ಶಾಂತಿ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಬಹುಭಾಷಾ ಚಲನಚಿತ್ರನಟ ಸುಮನ್ ವಿಶೇಷ ಅತಿಥಿಯಾಗಿ ಆಗಮಿಸಿದ್ದರು. ಪರ್ಮಲೆ ಕ್ಷೇತ್ರದ ಅಭಿವೃದ್ಧಿಗಾಗಿ ಸ್ಥಳದಾನ ಮಾಡಿರುವ ಕೋಟಿ ಚೆನ್ನಯ ಜನ್ಮಸ್ಥಳ ಸಂಚಲನಾ ಸಮಿತಿಯ ಗೌರವಾಧ್ಯಕ್ಷ ಚಿತ್ರನಟ ವಿನೋದ್ ಆಳ್ವ ಮೂಡಾಯೂರು, ಸಮಿತಿಯ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್, ಕಾರ್ಯಾಧ್ಯಕ್ಷ ಮಾಜಿ ಶಾಸಕ ರುಕ್ಮಯ ಪೂಜಾರಿ ಮತ್ತಿತರ ಪದಾಧಿಕಾರಿಗಳ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು. ಮಾಜಿ ಸಚಿವ ಕೃಷ್ಣ ಜೆ.ಪಾಲೆಮಾರು, ಶಾಸಕಿ ಶಕುಂತಳಾ ಶೆಟ್ಟಿ, ಜಿಪಂ ಮಾಜಿ ಅಧ್ಯಕ್ಷ ತುಂಗಪ್ಪ ಬಂಗೇರ, ರಾಜ್ಯ ಧಾರ್ಮಿಕ ಪರಿಷತ್‌ನ ಸದಸ್ಯ ಪದ್ಮನಾಭ ಕೊಟ್ಟಾರಿ, ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಕಾರ್ಯಕಾರಿ ಸಮಿತಿಯ ಸದಸ್ಯ ವಿಜಯಕುಮಾರ್ ಸೊರಕೆ, ಜಿಪಂ ಮಾಜಿ ಉಪಾಧ್ಯಕ್ಷ ಜಗನ್ನಾಥ್ ಸಾಲ್ಯಾನ್, ಬೆಳ್ತಂಗಡಿ ತಾಲೂಕು ಬಿಲ್ಲವ ಸಂಘದ ಅಧ್ಯಕ್ಷ ಭಗೀರಥ, ಪುತ್ತೂರು ತಾಲೂಕು ಬಿಲ್ಲವ ಸಂಘದ ಮಾಜಿ ಅಧ್ಯಕ್ಷ ಮದನ ಪೂಜಾರಿ ಕುದ್ಮಾರು, ಪಂಜಿಕಲ್ಲು ಬಾಳೇಶ್ವರ ಗರಡಿಯ ಆಡಳಿತ ಮೊಕ್ತೇಸರ ಪ್ರಕಾಶ್ ಕುಮಾರ್ ಜೈನ್, ಬಿಲ್ಲವ ಸಮಾಜದ ಪ್ರಮುಖರಾದ ಚರಣ್, ಶ್ರೀಧರ್ ಪಟ್ಲ, ಶೇಖರ್ ನಾರಾವಿ, ಕೃಷ್ಣಪ್ಪ ಪೂಜಾರಿ ಕಲ್ಲಡ್ಕ, ಸುರೇಂದ್ರ ಕೋಟ್ಯಾನ್, ಲೋಕೋಪಯೋಗಿ ಇಲಾಖೆಯ ಗುತ್ತಿಗೆದಾರ ಹರೀಶ್ ಕುಮಾರ್, ಜೆ.ಇ.ಚಂದ್ರಶೇಖರ್, ನಾರಾವಿ ಗೋಪಾಲ ಪೂಜಾರಿ, ವೇದನಾಥ ಸುವರ್ಣ ನರಿಮೊಗ್ರು, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಭಾಸ್ಕರ ಕೋಟ್ಯಾನ್, ರತನ್‌ಕುಮಾರ್ ಕರ್ನೂರು, ಮನೋಜ್ ರೈ ಪೇರಾಲು, ಬಡಗನ್ನೂರು ಗ್ರಾಪಂ ಮಾಜಿ ಅಧ್ಯಕ್ಷ ರವಿರಾಜ್ ರೈ ಸಜಂಕಾಡಿ, ಪ್ರೊ.ಬಿ.ಜೆ.ಸುವರ್ಣ, ಜಯಂತ ರೈ ಕುದ್ಕಾಡಿ, ಬಡಗನ್ನೂರು ಪಂಚಾಯತ್ ಉಪಾಧ್ಯಕ್ಷೆ ಬೇಬಿ, ಸದಸ್ಯ ಗುರುಪ್ರಸಾದ್ ರೈ ಕುದ್ಕಾಡಿ, ಕೆ.ಸಿ.ಪಾಟಾಳಿ ಪಡುಮಲೆ, ಗಣೇಶ್ ರೈ ಮುಳಿಪಡ್ಪು, ಲಕ್ಷ್ಮೀನಾರಾಯಣ ರಾವ್, ವಿಷ್ಣು ಭಟ್, ಮುಹಮ್ಮದ್ ಬಡಗನ್ನೂರು ಉಪಸ್ಥಿತರಿದ್ದರು.







