ಹಳೆ ವೈಶಮ್ಯದ ಹಿನ್ನೆಲೆ ಯುವಕನ ಕೊಲೆ
ತುಮಕೂರು, ಡಿ.18: ಹಳೆ ದ್ವೇಷದ ಹಿನ್ನೆಲೆ ಯುವಕನೋರ್ವನನ್ನು ಆತನ ಜೊತೆಗಿದ್ದವನೇ ಕೊಲೆ ಮಾಡಿರುವ ಘಟನೆ ಗುಬ್ಬಿ ತಾಲೂಕಿನ ತಗ್ಗಿಹಳ್ಳಿ ಅರಣ್ಯ ಪ್ರದೇಶದಲ್ಲಿ ನಡೆದಿದೆ.
ಕುಮಾರ (25) ಕೊಲೆಯಾದ ಯುವಕ. ಜೊತೆಯಲ್ಲಿದ್ದ ನಾಗರಾಜು ಕುಮಾರನನ್ನು ಕೊಲೆಗೈದಿದ್ದಾರೆ. ಇವರ ಜೊತೆಗಿದ್ದ ಇನ್ನೋರ್ವ ನಟರಾಜು ಗೆ ಗಾಯವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಕುಮಾರ,ನಾಗರಾಜು, ನಟರಾಜು ಮೂವರು ಜೊತೆಯಲ್ಲಿದ್ದರು. ಗುಬ್ಬಿ ಪೋಲಿಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ.
Next Story





